Publish Date: Fri, 07 Jul 2017 (14:41 IST)
Updated Date: Fri, 07 Jul 2017 (15:51 IST)
ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಯಡಿಯೂರಪ್ಪ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ, ಯಡಿಯೂರಪ್ಪನವರ ವಿರುದ್ಧ ಸಿಎಂ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಡೆ ಸ್ಲಂ ಕಡೆಗೆ ಅಂತಾರೆ, 20 ವರ್ಷಗಳಿಂದ ಸ್ಲಂ ನೋಡಿರಲಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ದಲಿತರ ಮನೆಯಲ್ಲಿ ಹೋಟೆಲ್ ತಿಂಡಿ ತಿಂದು ಬರ್ತಾರೆ. ದಲಿತರ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ದಲಿತರ ಮೇಲೆ ಅಷ್ಟು ಪ್ರೀತಿ ಇದ್ದರೆ ನಿಮ್ಮ ಮನೆಯ ಹೆಣ್ಣುಮಕ್ಕಳನ್ನ ಕೊಟ್ಟು ಮದುವೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಹಾಳಾಗಿದ್ದೇ ಬಿಜೆಪಿಯಿಂದ. ಸರ್ಕಾರದ ಆಸ್ತಿಗಳನ್ನ ಅಡ ಇಟ್ಟವರು ಬಿಜೆಪಿಯವರು. ಅವರು ಅಡವಿಟ್ಟ ವಸ್ತುಗಳನ್ನ ಬಿಡಿಸಿಕೊಳ್ಳುತ್ತಿದ್ದೇವೆ ಎಂದು ಸಿಎಂ ಗುಡುಗಿದ್ಧಾರೆ.