Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಹತ್ಯೆ ಹಿಂದೆ ಯಾರಿದ್ದಾರೆಂದು ಬೇಗ ಪತ್ತೆ ಹಚ್ಚಿ: ಡಿಜಿಪಿಗೆ ಸಿಎಂ ಖಡಕ್ ಆದೇಶ

ಗೌರಿ ಲಂಕೇಶ್ ಹತ್ಯೆ ಹಿಂದೆ ಯಾರಿದ್ದಾರೆಂದು ಬೇಗ ಪತ್ತೆ ಹಚ್ಚಿ: ಡಿಜಿಪಿಗೆ ಸಿಎಂ ಖಡಕ್ ಆದೇಶ
ಬೆಂಗಳೂರು , ಬುಧವಾರ, 6 ಸೆಪ್ಟಂಬರ್ 2017 (10:39 IST)
ಕಲ್ಬುರ್ಗಿ ಹಂತಕರನ್ನ ಹುಡುಕಾಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಗೌರಿ ಲಂಕೇಶ್ ಹತ್ಯೆಯಿಂದ ಮತ್ತೊಂದು ಸವಾಲು ಎದುರಾಗಿದೆ. ಹೀಗಾಗಿ, ಗೃಹ ಸಚಿವ ರಾಮಲಿಂಗಾರೆಡ್ಡಿ ಮತ್ತು ಡಿಜಿಪಿ ಆರ್.ಕೆ. ದತ್ತಾ ಅವರನ್ನ ಮನೆಗೆ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಹಂತರನ್ನ ಶೀಘ್ರ ಪತ್ತೆ ಹಚ್ಚುವಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಹಿಂದೆ ಯಾರಿದ್ದಾರೆ..? ಎಂಬುದರ ಬಗ್ಗೆ ಆದಷ್ಟು ಬೇಗ ಮಾಹಿತಿ ಕೊಡಿ. ನೀವ್ ಏನ್ ಮಾಡುತ್ತೀರೂ ನನಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಡಿಜಿಪಿಗೆ ಖಡಕ್ ಆದೇಶ ನೀಡಿದ್ದಾರೆಂದು ತಿಳಿದುಬಂದಿದೆ. ಈ ಮಧ್ಯೆ, ಕೇರಳ ಪ್ರವಾಸ ರದ್ದು ಮಾಡಿರುವ ಸಿಎಂ ಗೌರಿ ಲಂಕೇಶ್ ಹತ್ಯೆ ತನಿಖೆ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಇತ್ತ, ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಅಭಯ ನೀಡಿರುವ ಸಿಎಂ, ನಿಮ್ಮ ಜೊತೆ ನಾನಿದ್ಧೇನೆ ಎಂದು ಸಿಎಂ ಹೇಳಿದ್ಧಾರೆ.

ಇನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗೌರಿ ಲಂಕೇಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಸಂಜೆ ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ಗೌರಿ ಲಂಕೇಶ್ ಅಂತ್ಯ ಸಂಸ್ಕಾರ ನಡೆಯಲಿದ್ದು, ಸಹೋದರ ಇಂದ್ರಜಿತ್ ಲಂಕೇಶ್ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ಧಾರೆ.
.
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಲಂಕೇಶ್ ಹತ್ಯೆ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ..?