Select Your Language

Notifications

webdunia
webdunia
webdunia
webdunia

ಸಿಎಂ ಪುತ್ರ ರಾಕೇಶ್ ಅಗಲಿಕೆಗೆ ಜಗದೀಶ್ ಶೆಟ್ಟರ್ ವಿಷಾದ!

ಸಿಎಂ ಪುತ್ರ ರಾಕೇಶ್ ಅಗಲಿಕೆಗೆ ಜಗದೀಶ್ ಶೆಟ್ಟರ್ ವಿಷಾದ!
ಮೈಸೂರು , ಸೋಮವಾರ, 1 ಆಗಸ್ಟ್ 2016 (12:47 IST)
ಭವಿಷದಲ್ಲಿ ಉತ್ತಮ ರಾಜಕೀಯ ನಾಯಕನಾಗಬೇಕಿದ್ದ ಸಿಎಂ ಜೇಷ್ಠಪುತ್ರ ರಾಕೇಶ್ ಅಗಲಿಕೆ ಅತ್ಯಂತ ನೋವು ತಂದಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಷಾದ ವ್ಯಕ್ತಪಡಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಅವರ ಪಾರ್ಥಿವ ಶರೀಕದ ಅಂತಿಮ ದರ್ಶನ ಪಡೆಯಲು ಮೈಸೂರಿಗೆ ತೆರಳಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಭವಿಷದಲ್ಲಿ ಉತ್ತಮ ರಾಜಕೀಯ ನಾಯಕನಾಗಬೇಕಿದ್ದ ರಾಕೇಶ್ ಅಗಲಿಕೆ ನೋವು ತಂದಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು.
 
ರಾಕೇಶ್ ಸಿದ್ದರಾಮಯ್ಯನವರು ತಮ್ಮ ತವರು ಜಿಲ್ಲೆಯಾದ ಮೈಸೂರಿನ ಜನತೆಯೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಈ ಕ್ಷೇತ್ರದ ಅಭಿವೃದ್ಧಿ ನಿರ್ವಹನೆಯನ್ನು ಸಮರ್ಥವಾಗಿ ಮಾಡುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬ ವರ್ಗಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಾರ್ಥಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರ ಗಡಿಯಲ್ಲಿ ಬೆಳಗಾವಿ ಯೋಧ ಹುತಾತ್ಮ: ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ!