Publish Date: Thu, 28 May 2026 (08:37 IST)
Updated Date: Thu, 28 May 2026 (08:40 IST)
ಬೆಂಗಳೂರು: ಕರ್ನಾಟಕ ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸಿದ್ದರಾಮಯ್ಯ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದ್ದು ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ದಿನವೇ ಸಿಎಂ ಸ್ಥಾನ ಬಲಿದಾನ ಮಾಡಲಿದ್ದಾರೆ.
ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ಅದಕ್ಕೆ ತಕ್ಕಂತೆ ರಾಜಕಾರಣದ ಎಲ್ಲಾ ಪಟ್ಟುಗಳನ್ನೂ ತಮ್ಮ ಸುದೀರ್ಘ 50 ವರ್ಷಗಳ ವೃತ್ತಿ ಜೀವನದಲ್ಲಿ ಪ್ರಯೋಗಿಸಿ ತಮ್ಮದೇ ಸ್ಥಾನ ಪಡೆದುಕೊಂಡವರು. ಇದೀಗ ಅವರ ರಾಜಕೀಯ ಜೀವನ ಮಹತ್ತರ ಘಟ್ಟಕ್ಕೆ ಬಂದು ತಲುಪಿದೆ.
ಇಂದು ರಾಜೀನಾಮೆ ನೀಡಿದಲ್ಲಿ ಬಹುತೇಕ ರಾಜ್ಯ ರಾಜಕಾರಣದಲ್ಲಿ ಅವರದು ಮುಗಿದ ಅಧ್ಯಾಯವಾಗಲಿದೆ. ಹೇಗಿದ್ದರೂ ವಯಸ್ಸಾಗಿದೆ. ಮುಂದೆ ರಾಜ್ಯ ರಾಜಕಾರಣದಲ್ಲಿ ಮೊದಲಿನಂತೆ ತೊಡಗಿಸಿಕೊಳ್ಳಲು ಸಾಧ್ಯವಾಗದೇನೋ. ಇನ್ನೊಮ್ಮೆ ಅವರಿಗೆ ಸಿಎಂ ಆಗುವ ಅವಕಾಶ ಕ್ಷೀಣ.
ಹೀಗಾಗಿ ಮುಂದೆ ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ನೋಡಿದರೂ ಅಚ್ಚರಿಯಿಲ್ಲ. ಮಲ್ಲಿಕಾರ್ಜುನ ಖರ್ಗೆಯೂ ಇದೇ ರೀತಿ ರಾಜ್ಯ ರಾಜಕೀಯದಿಂದ ದೂರ ಸರಿದು ಇಳಿ ವಯಸ್ಸಿನಲ್ಲಿ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟವರು. ಈಗ ಅವರಿಗೆ ಸಾಥ್ ನೀಡಲು ರಾಷ್ಟ್ರ ಕಾಂಗ್ರೆಸ್ ಗೆ ಸಿದ್ದರಾಮಯ್ಯ ಹೋಗುವ ಸಾಧ್ಯತೆಯೂ ಇಲ್ಲದಿಲ್ಲ.
ಸದ್ಯಕ್ಕೆ ಕಾಂಗ್ರೆಸ್ ಗೆ ಹುಟ್ಟಾ ಕಾಂಗ್ರೆಸಿಗ, ನಿಷ್ಠಾವಂತ ಡಿಕೆ ಶಿವಕುಮಾರ್ ಗೆ ಪಟ್ಟ ಕಟ್ಟುವುದು ಅನಿವಾರ್ಯ. ಮುಂದಿನ ಚುನಾವಣೆ ಎದುರಿಸಲು ಡಿಕೆಶಿ ನಾಯಕತ್ವ ಅಗತ್ಯ. ಹೀಗಾಗಿ ಈಗ ಬಕ್ರೀದ್ ದಿನವೇ ಸಿದ್ದರಾಮಯ್ಯ ಸಿಎಂ ಸ್ಥಾನವನ್ನು ಬಲಿದಾನ ಮಾಡುತ್ತಿದ್ದಾರೆ ಎನ್ನಬಹುದು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ