ಹೆಚ್ಚು ಕೈಗಾರಿಕೆ ಸ್ಥಾಪನೆ ಒಳ್ಳೆಯ ವಾತಾವರಣ ಇರಬೇಕು.ಹೊಡಿಕೆ ಮಾಡಲು ಒಳ್ಳೆಯ ವಾತಾವರಣ ಇದೆ.ಕರ್ನಾಟಕದಲ್ಲಿ 1985 ರಲ್ಲಿ ಕೈಗಾರಿಕಾ ನೀತಿ ಪ್ರಾರಂಭ ಮಾಡಿತ್ತು.ಹೆಚ್ಚು ಪ್ರೋತ್ಸಾಹ ನೀಡುವ ನೀತಿ ಎಂದು ಹೇಳಬಹುದು.ಈಗಲೂ ಕೂಡಾ ನಿಮ್ಮ ಜೊತೆ ಜೊತೆ ಚರ್ಚೆ ಮಾಡಿ ರಫ್ತಿಗೆ ಪೂರಕವಾಗಿದ ನೀತಿಯನ್ನು ಜಾರಿ ಮಾಡ್ತೀವಿ.ಕರ್ನಾಟಕ ಸರ್ಕಾರ ಎಲ್ಲ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲಿದೆ.ಕೈಗಾರಿಕೆ ಬೆಳವಣಿಗೆ ಆಗಬೇಕು ಎಂಬ ಉದ್ದೇಶದಿಂದ ಕೌಶಲ್ಯ ಸಿಗಬೇಕು ಎಂದು ಕೌಶಲ್ಯ ಅಭಿವೃದ್ಧಿ ಇಲಾಖೆ ನಿಗಮ ಸ್ಥಾಪನೆ.ಯುವ ನಿಧಿ ನಾವು ಐದನೇ ಗ್ಯಾರಂಟಿ ಘೋಷಣೆ ಮಾಡಿದ್ದೀವಿ.ನಿರುದ್ಯೋಗ ಯುವಕರಿಗೆ 3 ಸಾವಿರ ನೀಡಲಿದೆ.ಡಿಸೆಂಬರ್ ಬಹುಶಃ ಜಾರಿಗೆ ಬರುತ್ತೆ.ನಿಮ್ಮ ಜೊತೆ ಸಭೆ ನಡೆಸಿ ಎಂತಹ ಉದ್ಯೋಗಿಗಳು ಬೇಕು.ಉದ್ಯೋಗ ಸಿಕ್ಕರೆ ಜಿಡಿಪಿ ಹೆಚ್ಚಾಗುತ್ತೆ ಅಂತಾ ಸಿದ್ದರಾಮಯ್ಯ ಹೇಳಿದ್ರು.
ಕಾನೂನು ಸುವ್ಯವಸ್ಥೆ ಇದ್ದರೆ ಹೂಡಿಕೆ ಹೆಚ್ಚಾಗುತ್ತೆ.ಅದಕ್ಕೆ ಸೂಕ್ತವಾದ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂದು ಉದ್ಯಮಿಗಳಿಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ಕರ್ನಾಟಕ ಒಂದನೇ ಸ್ಥಾನ ಮಾಡೋಕೆ ನಾವು ನೀವು ಶ್ರಮಿಸೋಣ ಎಂದು ಉದ್ಯಮಿದಾರರಿಗೆ ಸಿಎಂ ಸಿದ್ದರಾಮಯ್ಯ. ಕರೆ ನೀಡಿದ್ದಾರೆ.