Select Your Language

Notifications

webdunia
webdunia
webdunia
webdunia

ಚುನಾವಣೆ ಅಕ್ರಮಗಳಲ್ಲಿ ಸಿಎಂ ಗಿನ್ನಿಸ್ ದಾಖಲೆ ಬರೆದು ಬಿಟ್ರು: ಶ್ರೀನಿವಾಸ್ ಪ್ರಸಾದ್

ಚುನಾವಣೆ ಅಕ್ರಮಗಳಲ್ಲಿ ಸಿಎಂ ಗಿನ್ನಿಸ್ ದಾಖಲೆ ಬರೆದು ಬಿಟ್ರು: ಶ್ರೀನಿವಾಸ್ ಪ್ರಸಾದ್
ಮೈಸೂರು , ಸೋಮವಾರ, 10 ಏಪ್ರಿಲ್ 2017 (16:03 IST)
ಚುನಾವಣೆ ಅಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಗಿನ್ನಿಸ್ ದಾಖಲೆ ಬರೆದು ಬಿಟ್ರು. ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
 
ಮೈಸೂರು ನಗರದ ನಿವಾಸದಲ್ಲಿ ಮಾತನಾಡಿದ ಅವರು ಎರಡು ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಯೇ 100 ಕೋಟಿ ರೂಪಾಯಿ ಹಂಚಲಾಗಿದೆ. ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
 
ಚಾಮುಂಡೇಶ್ವರಿ ಉಪಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದಾಗ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೂಗಾಡಿದ್ದರು. ಆದ್ರೆ, ಇದೀಗ ಅದೇ ಕೆಲಸವನ್ನು ಸಿಎಂ ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ಕಿಡಿಕಾರಿದರು.
 
ಚಾಮುಂಡೇಶ್ವರಿ ಉಪಚುನಾವಣೆಗಿಂತ ಹೆಚ್ಚಿನ ಆಕ್ರಮಗಳು ಇದೀಗ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಡೆದಿವೆ ಎಂದು ನಂಜನಗೂಡು ಕ್ಷೇತ್ರದ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಳು ಆರೋಪ ಹೊರಿಸಿ ಭಾರತೀಯನನ್ನ ಗಲ್ಲಿಗೇರಿಸಿದ ಪಾಕಿಸ್ತಾನ