Webdunia - Bharat's app for daily news and videos

Install App

ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ವೋಟಿನ ಋಣ ತೀರಿಸಿದ್ದಾರೆ: ಬಜೆಟ್‌ಗೆ ಆರ್‌ ಅಶೋಕ್‌ ಆಕ್ರೋಶ

Sampriya
ಶುಕ್ರವಾರ, 7 ಮಾರ್ಚ್ 2025 (15:48 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 16ನೇ ಬಜೆಟ್‌ನಲ್ಲಿ ಹೊಸತನ ಏನಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ, ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಈ ಬಜೆಟ್ ಮೂಲಕ ಋಣ ತೀರಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

 ಸಿಎಂ ಸಿದ್ದರಾಮಯ್ಯರ ಮಂಡಿಸಿದ 16ನೇ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಪ ಸಂಖ್ಯಾತ ಕಾಲೋನಿಗೆ ಒಂದು ಸಾವಿರ ಕೋಟಿ ಇಟ್ಟಿದ್ದಾರೆ. ಫಾರಿನ್ ಹೋಗಲು 20 ಲಕ್ಷ ಇತ್ತು, ಈಗ 30 ಲಕ್ಷಕ್ಕೆ ಹೆಚ್ಚಿಸಿದ್ದಾರೆ.  ಗುರುದ್ವಾರ ಹೋಗಲು ಎರಡು ಕೋಟಿ, ಕ್ರಿಶ್ಚಿಯನ್ನರಿಗೆ 200 ಕೋಟಿ ಕೊಟ್ಟಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ವೋಟಿನ ಋಣ ತೀರಿಸ್ತಿದ್ದಾರೆ ತೀರಿಸಿದ್ದಾರೆ ಎಂದು ಕಿಡಿಕಾರಿದರು.

193 ಪೇಜ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಏನೂ ಹೊಸತನವಿಲ್ಲ. ಅಂತ ಅಶೋಕ್ ಕಿಡಿಕಾರಿದ್ದಾರೆ.ಕುಡಿಯಲು ನೀರು ಕೊಡು ಅಂತ ಹೇಳಿದ್ದಾರೆ. ಆದರೆ ನೀರಾವರಿ ಯೋಜನೆಗೆ ಗುಟುಕು ನೀರೂ ಇಲ್ಲ. ಬೆಂಗಳೂರಿನಲ್ಲಿ ಯಾರೂ ರಸ್ತೆ ಮೇಲೆ ಓಡಾಡಲ್ಲ, ಎಲ್ಲಾ ಸುರಂಗದಲ್ಲೇ ಓಡಾಡೋದು ಅಂತ ಅಶೋಕ್ ವ್ಯಂಗ್ಯವಾಡಿದ್ರು.

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 16ನೇ ಬಜೆಟ್‌ಗೆ ಬಿಜೆಪಿ ನಾಯಕರು ತೀವ್ರಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಆನೆ, ಕುದುರೆ ಏರಿ ಕೊಂಡು ಹೋದಿರಿ ನೀವು, ಸಿದ್ದರಾಮಯ್ಯ ಅವರು ಸಾಬ್ರು ಜಟಕಾ ಕುದುರೆ ಏರಿ ಹೊರಟಿದ್ದಾರೆ ಅಂತ ಅಶೋಕ್ ಲೇವಡಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments