Webdunia - Bharat's app for daily news and videos

Install App

50 ವೇಗದೂತ ಮಾದರಿಯ ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

Sampriya
ಬುಧವಾರ, 18 ಸೆಪ್ಟಂಬರ್ 2024 (20:13 IST)
Photo Courtesy X
ಬೆಂಗಳೂರು: ಇಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವೇಗದೂತ ಮಾದರಿ ಬಸ್‌ಗಳ ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಹಾಗೂ ಇತರೇ ಸಚಿವರು ನೆರವೇರಿಸಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಚಿವ ರಾಮಲಿಂಗಾರೆಡ್ಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಈ ಭಾಗದ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಡಿಯಲ್ಲಿ ಖರೀದಿಸಲಾದ ಒಟ್ಟು 109 ವೇಗದೂತ ಮಾದರಿಯ ಬಸ್ಸುಗಳ ಪೈಕಿ ಇಂದು 50 ಬಸ್‌ಗಳನ್ನು ಉದ್ಘಾಟನೆ ಮಾಡಲಾಗಿದೆ‌.

ಈ ಬಸ್‌ಗಳಲ್ಲಿ 200 HP ಸಾಮರ್ಥ್ಯದ BS-6 ಎಂಜಿನ್‌ಗಳನ್ನು ಅಳವಡಿಸಿದ್ದು, 50 ಪ್ರಯಾಣಿಕ ಆಸನಗಳನ್ನು ಹೊಂದಿವೆ.

ಈ ಬಸ್‌ಗಳನ್ನು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ ಬಸ್ ಕೋಡ್‌ನಂತೆ ನಿರ್ಮಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ, ಈ ಬಸ್ಸುಗಳಲ್ಲಿ, Fire Detection and Alarm System, Electronic Vehicle Stability Control System, ಸ್ವಯಂ ಚಾಲಿತ ಬಾಗಿಲು , ನಾಲ್ಕು ಸಿ.ಸಿ. ಕ್ಯಾಮೆರಾಗಳು, ರೀವರ್ಸ್ ಪಾರ್ಕಿಂಗ್ ಅಲರಾಮ್ ಸಿಸ್ಟಂ, ವೆಹಿಕಲ್ ಲೋಕೆಶನ್ ಟ್ರ್ಯಾಕಿಂಗ್ ಸಿಸ್ಟಂ ಹಾಗೂ ಪ್ಯಾಸೆಂಜರ್ ಇನಫಾರಮೆಶನ್ ಸಿಸ್ಟಂ & ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ.

ಶ್ರೀ ಎಚ್.ಕೆ ಪಾಟೀಲ್, ಶ್ರೀ ಪರಮೇಶ್ವರ್, ಶ್ರೀ ಕೆ.ಜೆ ಜಾರ್ಜ್, ಶ್ರೀ ಕೆ.ಎಚ್ ಮುನಿಯಪ್ಪ, ಶ್ರೀ ಅಜಯ್ ಧರ್ಮಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments