Publish Date: Thu, 27 Jul 2017 (12:55 IST)
Updated Date: Thu, 27 Jul 2017 (12:57 IST)
ಮಾಜಿ ಮುಖ್ಯಮಂತ್ರಿ 80 ವರ್ಷ ವಯಸ್ಸಿನ ಎನ್.ಧರ್ಮಸಿಂಗ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಧರ್ಮಸಿಂಗ್ ನಿಧನದಿಂದ ಆತ್ಮಿಯ ಗೆಳೆಯನನ್ನು ಕಳೆದುಕೊಂಡಂತಾಗಿದೆ. ಅವರ ನಿಧನ ಆಘಾತ ತರುವ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಆದರಣೀಯ, ನಂಬಿಕಸ್ತ ಹಿರಿಯ ನಾಯಕನನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದೆ. ಅವರ ನಿಧನದಿಂದ ಕಾಂಗ್ರೆಸ್‌ಗೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಅಜಾತ ಶತ್ರು ಎಂದೇ ಕರೆಯಲ್ಪಡುತ್ತಿದ್ದ ಅವರಿಗೆ ವಿಪಕ್ಷಗಳ ನಾಯಕರು ಕೂಡಾ ಅಷ್ಟೇ ಗೌರವ ಸಲ್ಲಿಸುತ್ತಿದ್ದರು. ಅಂತಹ ನಾಯಕನನ್ನು ಕಳೆದುಕೊಂಡಿರುವುದು ನಮ್ಮ ದುರ್ದೈವ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.