Select Your Language

Notifications

webdunia
webdunia
webdunia
webdunia

ಕೆಂಪಯ್ಯ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

ಕೆಂಪಯ್ಯ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು , ಭಾನುವಾರ, 16 ಜುಲೈ 2017 (11:09 IST)
ಬಂಟ್ವಾಳ ಗಲಭೆ ಪ್ರಕರಣ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ ತೋರಿದ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಗಳಲ್ಲಿ ಗುಪ್ತಚರ ಇಲಾಖೆ ವೈಫಲ್ಯತೆ ಮೆರೆದಿರುವ ಅಧಿಕಾರಿಗಳ ವಿರುದ್ಧ ಕೂಡಾ ಹರಿಹಾಯ್ದಿದ್ದಾರೆ. ಗುಪ್ತಚರ ಡಿಜಿ ಎಂ.ಎನ್.ರೆಡ್ಡಿ ವಿರುದ್ಧವೂ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಕರ್ಮಕಾಂಡದ ಬಗ್ಗೆ ಡಿಐಜಿ ರೂಪಾ ನೀಡಿರುವ ವರದಿ ಕೂಡಾ ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ. ಡಿಐಜಿ ಮತ್ತು ಡಿಜಿ ಸತ್ಯನಾರಾಯಣ್ ರಾವ್ ನಡುವಿನ ವೈಮನಸ್ಸು ಕೂಡಾ ಸರಕಾರದ ನಿದ್ದೆಗೆಡಿಸಿದೆ ಎನ್ನಲಾಗಿದೆ.
 
ಪರಪ್ಪನ ಅಗ್ರಹಾರ ಜೈಲು ಜೈಲಲ್ಲ ಅದೊಂದು ಬಾರ್, ಜೂಜುಕೋರರ ಅಡ್ಡೆ ಇತರ ಅನೈತಿಕ ಕೃತ್ಯಗಳ ತಾಣವಾಗಿದೆ ಎಂದು ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವುದು ಕೂಡಾ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಎಂಪಿ ರೂಪಾ ಗಂಗೂಲಿ ವಿರುದ್ಧ ಎಫ್ ಐಆರ್ ದಾಖಲು