Select Your Language

Notifications

webdunia
webdunia
webdunia
Friday, 21 February 2025
webdunia

ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ  ಕೆಂಡಾಮಂಡಲ
ಬೆಂಗಳೂರು , ಮಂಗಳವಾರ, 5 ಸೆಪ್ಟಂಬರ್ 2017 (12:45 IST)
ಅನುಮತಿ ನಿಡದಿದ್ದರೂ ಬೈಕ್ ರ್ಯಾಲಿ ನಡೆಸಲು ಉದ್ಧೇಶಿಸಿದ್ದ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ. ಶಾಂತಿ ಕದಡುವ ಯಾವುದೇ ಕೆಸಕ್ಕೆ ಅವಪಾಶ ನಿಡುವುದಿಲ್ಲ ೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ಸಮಾವೇಶಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಬೈಕ್ ರ್ಯಾಲಿಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಬೈಕ್ ರ್ಯಾಲಿ ಬದಲು ಪಾದಯಾತ್ರೆ ಮಾಡಲಿ. ನಾವೂ ಬಳ್ಳಾರಿ ಪಾದಯಾತ್ರೆ ಮಾಡಿದ್ದೆವು. ಬಿಜೆಪಿ ಬೈಕ್ ರ್ಯಾಲಿಯಿಂದ ಸಾಮರಸ್ಯ ಹಾಳಾಗುತ್ತದೆ. ಶಾಂತಿ ಕದಡಲು ಬಿಜೆಪಿಯವರು ಮುಂದಾಗಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು ಚಲೋ ಬದಲು ಬಿಜೆಪಿಯವರು ದೆಹಲಿ ಚಲೋ ಮಾಡಲಿ. ರೈತರಿಗೆ ವಾಣಿಜ್ಯ ಬ್ಯಾಂಕ್`ಗಳು ನೀಡಿರುವ 40 ಸಾವಿರ ಕೋಟಿ ರೂ.  ಸಾಲಮನ್ನಾ ಮಾಡಲು ಒತ್ತಾಯ ಮಾಡಲಿ. ನಾವೂ ಅವರ ಜೊತೆಗಿರುತ್ತೇವೆ. ಯಡಿಯೂರಪ್ಪ ಆವೇಶದಲ್ಲಿ ಏನಾದರೂ ಮಾತನಾಡಲಿ ನಾವು ಕಾನೂನು ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಬೈಕ್ ಜಾಥಾಗೆ ಫ್ರೀಡಂಪಾರ್ಕ್`ನಲ್ಲೇ ಫುಲ್ ಸ್ಟಾಪ್ ಇಟ್ಟ ಪೊಲೀಸರು