Select Your Language

Notifications

webdunia
webdunia
webdunia
webdunia

ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಸಿಎಂ ಸಮ್ಮತಿ: ಮಾತುಕತೆ ಯಶಸ್ವಿ

ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಸಿಎಂ ಸಮ್ಮತಿ: ಮಾತುಕತೆ ಯಶಸ್ವಿ
ಬೆಂಗಳೂರು , ಸೋಮವಾರ, 10 ಏಪ್ರಿಲ್ 2017 (12:28 IST)
ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ವೇತನ 1 ಸಾವಿರ ರೂ. ಮತ್ತು ಸಹಾಯಕಿಯರ ವೇತನ 500 ರೂ. ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಬಜೆಟ್`ನಲ್ಲಿ 1 ಸಾವಿರ ರೂ. ಹೆಚ್ಚಿಗೆ ಮಾಡಲಾಗಿತ್ತು. ಇದೀಗ, ಮತ್ತೆ 1 ಸಾವಿರ ರೂ. ಹೆಚ್ಚಳಕ್ಕೆ ಸಿಎಂ ಸಮ್ಮತಿಸಿದ್ದಾರೆ.
 

ವೇತನ ಪರಿಷ್ಕರಣೆ ಬಳಿಕ ಅಂಗನವಾಡಿ ಕಾರ್ಯಕರ್ತೆಯರ ವೇತನ 6ರಿಂದ 8 ಸಾವಿರ ರೂಪಾಯಿಗೆ ಮತ್ತು ಸಹಾಯಕಿಯರ ವೇತನ 3500 ರೂ.ನಿಂದ 4000ಕ್ಕೆ ಏರಿಕೆಯಾಗಲಿದೆ.

ಸಭೆಯಲ್ಲಿ ಸಕರಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ. 10 ಸಾವಿರ ರೂ. ಗೌರವಧನ, ಅಂಗನವಾಡಿಯಲ್ಲಿ ಎಲ್`ಕೆಜಿ, ಯುಕೇಜಿ ಸ್ಥಾಪನೆಗೂ ಬೇಡಿಕೆ ಇಟ್ಟಿದ್ದೆವು. ಒಟ್ಟು 2 ಸಾವಿರ ಹೆಚ್ಚಳಕ್ಕೆ ಸಿಎಂ ಸಮ್ಮತಿ ಸೂಚಿಸಿದ್ದಾರೆ. ಸರ್ವಿಸ್ ರೂಲ್ಸ್`ಗೆ ಸಮಿತಿ ರಚನೆಗೆ ನಿರ್ಧರಿಸಲಾಗಿದ್ದು, ಶೇ.50ರಷ್ಟು ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ: ಜಿ. ಪರಮೇಶ್ವರ್ ಸ್ಪಷ್ಟನೆ