ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು,ಸಚಿವ ಹೆಚ್ ಸಿ ಮಹದೇವಪ್ಪ, ಹೆಚ್.ಕೆ ಪಾಟೀಲ್, ನಾಗೇಂದ್ರ, ಪ್ರಿಯಾಂಕ ಖರ್ಗೆ, ರಾಜ್ಯಸಭೆ ಸದಸ್ಯ ಎಲ್ ಹನುಮಂತಯ್ಯ ಸಭೆಯಲ್ಲಿ ಉಪಸ್ಥಿತಿರುದ್ದರು.ಪರಿಶಿಷ್ಟ ಜಾತಿಗಳ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡದ ವಿಶೇಷ ಘಟಕ ಯೋಜನೆಯ ಅಡಿ ಶಾಸನಾತ್ಮಕ ಒದಗಿಸಿದ ಅನುದಾನ ಬಳಕೆಗೆ ಕ್ರಿಯಾ ಯೋಜನೆಯನ್ನ ಅಂತಿಮ ಗೊಳಿಸಿ ಒಪ್ಪಿಗೆ ನೀಡುವುದು.ಈ ಬಾರಿ ಬಜೆಟ್ ನಲ್ಲಿ SCSP ಮತ್ತು ಟಿಎಸ್‌ಪಿ ಅಡಿ 34 ಸಾವಿರ ಕೋಟಿ ಅನುದಾನವನ್ನು ಮೀಸಲು ಇಡಲಾಗಿದೆ .ಶೋಷಿತ ಸಮುದಾಯಗಳ ಸಮಗ್ರ ಅಭಿವೃದ್ಧಿ ಹಾಗೂ ಜೀವನ ಮಟ್ಟದ ಸುಧಾರಣೆಗೆ ಸಂಬಂಧಿಸಿದ ಯಾವೆಲ್ಲ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂಬುದು ಚರ್ಚಿಸಿ ಇಲಾಖೆವಾರು, ಹಂಚಿಕೆಯಾದ ಅನುದಾನ ಬಳಕೆ, ಸಾರ್ವಜನಿಕ ಆಸ್ತಿ ಸ್ರುಜನೆ, ಪರಿಣಾಮಕಾರಿಯಾಗಿ ಅನುಷ್ಠಾನ ಸಮರ್ಪಕವಾಗಿ ಬಳಕೆ ಹಾಗೂ ಪಾರದರ್ಶಕತೆ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಯೋಜನೆಯ ಅಡಿ ಅನುದಾನ ಬಳಕೆ ವಿಚಾರದಲ್ಲಿ ಹಿಂದಿನ ಅನುಭವಿ ಗಮನದಲ್ಲಿಟ್ಟುಕೊಳ್ಳಬೇಕು.ಯಾಂತ್ರಿಕವಾಗಿ ಯೋಚಿಸಿದೇ ಧಮನಿತರ ಬಗ್ಗೆ ಕಾಳಜಿ ವಹಿಸಿ ಅಗತ್ಯಕ್ಕೆ ಆಧಾರವಾಗಿ ಸ್ಪಂದಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಹಿತೋಪದೇಶ ಸಿಎಂ ಸಿದ್ದರಾಮಯ್ಯ ನೀಡಿದ್ರು.