ಬಿಜೆಪಿ ಪ್ರಣಾಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಿಡಿಕಾರಿದ್ದಾರೆ.. ಹಾವೇರಿಯಲ್ಲಿ ಮಾತನಾಡಿದ ಅವರು,
ಮೊದಲು ನಂದಿನಿ ಮುಚ್ಚದೆ, ಅಮುಲ್ಗೆ ಮರ್ಜ್ ಮಾಡೋದನ್ನ ಬಂದ್ ಮಾಡಲಿ ಈ ಮುಂಡೆವು ಎಂದು ಕಿಡಿಕಾರಿದ್ದಾರೆ.. ಇವತ್ತು ಅರ್ಧ ಲೀಟರ್ ಹಾಲಲ್ಲ, ಅರ್ಧ ಲೀಟರ್ ವಿಷ ಹಂಚುತ್ತಿದ್ದಾರೆ.. ಮೂರೂವರೆ ವರ್ಷ ಏನು ಮಾಡಿದ್ರು, ರೈತರು ಬದುಕುವಂತಿಲ್ಲ ಎಂದು ಕಿಡಿಕಾರಿದ್ರು.. ಪೆಟ್ರೋಲ್ ದರ 106 ರೂಪಾಯಿ ಆಗಿದೆ, ಹತ್ತು ಲೀಟರ್ ಪೆಟ್ರೋಲ್ ಫ್ರೀ ಕೊಡ್ತೀನಿ ಅಂತಾ ಬಿಜೆಪಿಯವರು ಹೇಳಲಿ.. ಗ್ಯಾಸ್ ರೇಟ್ 1,100 ಆಗಿದೆ.. ಹಳ್ಳಿಗಳಲ್ಲಿ ಕಟ್ಟಿಗೆ ಸಿಗ್ತಿಲ್ಲ.ನಾಲ್ಕು ರೊಟ್ಟಿ ಮಾಡಬೇಕಂದ್ರೆ ಇವತ್ತು ಗ್ಯಾಸ್ ಸಿಗಂಗಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.. ವಿವೇಕ ಇಲ್ಲದ ಅವೀವೇಕಿಗಳನ್ನ ತಂದು ರಾಜ್ಯದಲ್ಲಿ ಅಧಿಕಾರದಲ್ಲಿ ಕುಳಿಸಿದ್ರೆ ಈ ಪರಿಸ್ಥಿತಿ ಆಗುತ್ತೆ.. ಕಾಂಗ್ರೆಸ್ನವರು ಟಿಕೆಟ್ ಮಾರಿಕೊಂಡಿದ್ದಾರೆ. ಬಿಜೆಪಿಯವರು ದೇಶ ಮಾರಲು ಹೊರಟಿದ್ದಾರೆ.. ನಮಗೆ ಯಾರ ಹಂಗು ಬೇಕಾಗಿಲ್ಲ. ಕಾಂಗ್ರೆಸ್ನವರಿಗೆಅಧಿಕಾರಕ್ಕೆ ಬರ್ತಿವಿ ಎನ್ನುವ ಗ್ಯಾರಂಟಿ ಇಲ್ಲ.. ಮತ್ತೆ ಅವರ ಗ್ಯಾರಂಟಿ ಕಾರ್ಡ್ಗೆ ಏನು ಬೆಲೆ ಬಂತು ಎಂದು ಪ್ರಶ್ನಿಸಿದ್ರು. ಮನೆಗೆ ಎರಡು ಸಾವಿರ ಅಂದಿದ್ದಾರೆ...ಅತ್ತೆಗೆ ಕೊಡ್ತಾರೊ? ಸೊಸೆಗೆ ಕೊಡ್ತಾರೋ? ಮನೆ ಮನೆಗೆ ಜಗಳ ಹಚ್ಚಲು ಕಾಂಗ್ರೆಸ್ನವರು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.