Webdunia - Bharat's app for daily news and videos

Install App

ಮುಡಾ ಅಧಿಕಾರಿಗಳಿಂದ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ಗಳ ತೆರವು

Webdunia
ಶನಿವಾರ, 18 ಡಿಸೆಂಬರ್ 2021 (20:48 IST)
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಎರಡು ಶೆಡ್‌ಗಳನ್ನು ಶನಿವಾರ ಬೆಳಗ್ಗೆ ತೆರೆವುಗೊಳಿಸಿದ ಪ್ರಾಧಿಕಾರದ ಅಧಿಕಾರಿಗಳು, ನೂರು ಕೋಟಿ ರೂ ಮೌಲ್ಯದ 5.14 ಜಮೀನನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲ್ಲೂಕು ಕಸಬಾ ಹೋಬಳಿಯ ಬಸವನ ಹಳ್ಳಿ ಗ್ರಾಮದ ಸರ್ವೆ ನಂ 118ರ 5.14 ಎಕರೆ ಜಮೀನನ್ನು ಪ್ರಾಧಿಕಾರವು 1991 ರ ಡಿಸೆಂಬರ್ 23 ರಂದು ವಿಜಯ ನಗರ 4ನೇ, 2ನೇ ಘಟ್ಟದ ​​ನಿರ್ಮಾಣಕ್ಕಾಗಿ ಭೂಸ್ವಾಧೀನಪಡಿಸಿಕೊಂಡು ಪರಿಹಾರ ಮೊತ್ತವನ್ನು ಭೂಸ್ವಾಧೀನಪಡಿಸಿಕೊಂಡಿತು.
ಸದರಿ ಸ್ವತ್ತಮಗಮಿ ಭೂಮಾಲೀಕರಿಂದ ಒಪ್ಪಂದ ಮಾಡಿಕೊಂಡ ಮಹದೇವಯ್ಯ ಎಂಬವರು ಸಿವಿಲ್ ನ್ಯಾಯಾಲಯದಲ್ಲಿ ಅಸಲು ಹಾಕಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯ ಸದರಿ ಜಮೀನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಇಂದು ಮುಂಜಾನೆ 6 ಗಂಟೆಗಳಲ್ಲಿ ಸೂಕ್ತ ಪೊಲೀಸ್ ರಕ್ಷಣೆಯೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ಕಾರ್ಯಚರಣೆ ನಡೆಸಿದ ಪ್ರಾಧಿಕಾರದ ಅಧಿಕಾರಿಗಳು ನಿರ್ಮಿಸಿದ್ದಾರೆ 2 ಅನಧಿಕೃತ ಶೆಡ್‌ಗಳನ್ನು ಹೊಂದಿದ್ದು, ಜಮೀನನ್ನು ಪ್ರಾಧಿಕಾರದ ವಶಕ್ಕೆ ತೆಗೆದುಕೊಂಡಿದೆ, ಅಲ್ಲಿ ಫಲಕವನ್ನು ಅಳವಡಿಸಲಾಗಿದೆ. ಸದರಿ ಜಮೀನಿನಲ್ಲಿ
50*80 ಅಳತೆಯ 11 ನಿವೇಶನಗಳು, 40*60 ಅಳತೆಯ 36 ನಿವೇಶನಗಳು ರಚನೆಯಾಗಲಿವೆ. ಸದರಿ ಸ್ವತ್ತಿನ
ಮೌಲ್ಯದ ಸುಮಾರು 100 ಕೋಟಿಗಳಷ್ಟು ಎಂದು ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ ನಟೇಶ್ ಅವರು ಪ್ರಕಟಿಸಿದ್ದಾರೆ. ಕಾರ್ಯಚರಣೆ ವೇಳೆ ಪ್ರಾಧಿಕಾರದ ಅಧೀಕ್ಷಕ ಭೂ ಸ್ವಾಧೀನಾಧಿಕಾರಿ ಹರ್ಷವರ್ಧನ್, ಕಾರ್ಯಪಾಲಕ ಅಭಿಯಂತರುಗಳಾದ ಮೋಹನ್, ಸತ್ಯನಾರಾಯಣ ಜೋಷಿ, ವಲಯಾಧಿಕಾರಿಗಳಾದ ರವೀಂದ್ರಕುಮಾರ್, ಕಿರಣ್, ಶಿವಣ್ಣ, ನಾಗೇಶ್, ರವಿಶಂಕರ್. ಸಹಾಯಕ ಕಿರಿಯ ಅಭಿಯಂತರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments