Webdunia - Bharat's app for daily news and videos

Install App

ಸಾವಿಗೂ ಮುನ್ನಾ ಅಚ್ಚರಿ ವಿಚಾರ ಹಂಚಿಕೊಂಡಿದ್ದ ಸಿಜೆ ರಾಯ್

Sampriya
ಶನಿವಾರ, 31 ಜನವರಿ 2026 (17:06 IST)
ತಾನೇ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಸಾವಿಗೂ ಮುನ್ನಾ ತನ್ನ ತಾಯಿಯ ಜತೆ ಮಾತನಾಡಲು ಬಯಸಿದ್ದರು ಎಂದು ತಿಳಿದುಬಂದಿದೆ. 

ಆದಾಯ ತೆರಿಗೆ (ಐಟಿ) ಅಧಿಕಾರಿಗಳು ತಮ್ಮ ಕಂಪನಿಗಳ ಮೇಲೆ ತನಿಖೆ ನಡೆಸುತ್ತಿರುವಾಗಲೇ ರಾಯ್ ಅವರು ಅದೇ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಇನ್ನೂ ಸಾವಿಗೂ ಮುನ್ನಾ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿರುವುದಾಗಿ ಸಹೋದ್ಯೋಗಿಗಳಿಗೆ ತಿಳಿಸಿದ್ದರು ಎಂಬ ಅಂಶ ಇದೀಗ ತಿಳಿದುಬಂದಿದೆ. 

ಡಿಸೆಂಬರ್ ಮೊದಲ ವಾರದಲ್ಲಿ ಸಿಜೆ ರಾಯ್‌ಗೆ ಸಂಬಂಧಿಸಿದ ಕಂಪನಿಗಳ ಮೇಲೆ ಮೊದಲು ಆದಾಯ ತೆರಿಗೆ ದಾಳಿ ನಡೆಸಲಾಯಿತು. ಕಳೆದ ಕೆಲವು ದಿನಗಳಿಂದ, ಐಟಿ ಅಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಅವರನ್ನು ಪ್ರಶ್ನಿಸುತ್ತಿದ್ದರು ಮತ್ತು ಸ್ಪಷ್ಟೀಕರಣಗಳನ್ನು ಕೇಳುತ್ತಿದ್ದರು.

ರಾಯ್ ಈಗಾಗಲೇ ಕೇರಳದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ದುಬೈನಿಂದ ಹಿಂದಿರುಗಿದ ನಂತರ, ಅಗತ್ಯವಿದ್ದಾಗ ಬೆಂಗಳೂರಿನಲ್ಲಿ ಲಭ್ಯವಿರುತ್ತಾರೆ ಎಂದು ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಐಟಿ ತಂಡವು ನಗರದಲ್ಲಿ ಅವರನ್ನು ವಿಚಾರಣೆ ಮಾಡಲು ಪ್ರಾರಂಭಿಸಿತು.

ಐಟಿ ದಾಳಿ ಅಂತಿಮ ಘಟ್ಟಕ್ಕೆ ತಲುಪುತ್ತಿದ್ದಂತ್ತೆ ಸಿಜೆ ರಾಯ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

13ರಂದು ಕರ್ನಾಟಕ ಬಂದ್ ಮಾಡಿಯೇ ಸಿದ್ದ: ಹೋರಾಟದಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದ ವಾಟಾಳ್

ಕಾವೇರಿ ನೀರು ಹಂಚಿಕೆ ವಿವಾದ: ವಿಜಯ್‌ಗೆ ಮಹತ್ವದ ಪತ್ರ ಬರೆದ ಬಿವೈ ವಿಜಯೇಂದ್ರ

ವರುಣಾರ್ಭಟ ನಡುವೆ ಮುಂದಿನ ನಾಲ್ಕು ದಿನ ಉಡುಪಿಯಲ್ಲಿ ಹೇಗಿರಲಿದೆ ಗೊತ್ತಾ ಹವಾಮಾನ

ಪ್ರತಿಯೊಂದು ವರ್ಗವೂ ಪ್ರಧಾನಿ ಮೋದಿಯೊಂದಿಗಿದೆ ಎಂಬ ನಂಬಿಕೆ: ಪಿಯೂಷ್ ಗೋಯಲ್

ಕರಾವಳಿಯಲ್ಲಿ ಭಾರೀ ಮಳೆ, ನೇತ್ರಾವತಿ ನೀರಿನ ಮಟ್ಟ ಎಷ್ಟು ಏರಿಕೆಯಾಗಿದೆ ಗೊತ್ತಾ

ಮುಂದಿನ ಸುದ್ದಿ
Show comments