ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಸ್‌ಮಸ್  ಹೊಸ ವರ್ಷ ಕಾರ್ಯಕ್ರಮಗಳಿಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆವರ್ಷ ಸಂಭ್ರಮಾಚರಣೆಗಳಿಗೆ ಬ್ರೇಕ್ ಹಾಕಿದ್ದ ಮಹಾಮಾರಿ ಕೊರೊನಾ ಸದ್ಯ ಸುಳಿವೇ ಇಲ್ಲದಂಗೆ ಧೂಳಿಪಟವಾಗಿದೆ. ಹೀಗಾಗಿ 2 ವರ್ಷದ ಬಳಿಕ ಅದ್ಧೂರಿಯಾಗಿ ಕ್ರಿಸ್‌ಮಸ್, ಹೊಸ ವರ್ಷ ಆಚರಿಸಲು ಬೆಂಗಳೂರು ತಯಾರಿ ನಡೆಸುತ್ತಿದೆ. ಇನ್ನು ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಟಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
 
 			
 
 			
			                     
							
							
			        							
								
																	
	ಇನ್ನೂ  ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಆಯೋಜಕರು, ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ  ಸೂಚನೆಗಳನ್ನು ನೀಡಿದ್ದಾರೆ. ಕಾರ್ಯಕ್ರಮಕ್ಕೆ ಸಿಬ್ಬಂದಿ ಆಯೋಜನೆ ಮಾಡುವ ವೇಳೆ ಅವರ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಲು ಹಾಗೂ ಮಹಿಳಾ ಸಿಬ್ಬಂದಿಯನ್ನು ನೇಮಿಸಿ ಅವರಿಗೆ ಸರಿಯಾಗಿ ಟೈನಿಂಗ್ ಕೊಟ್ಟು ಅವರಿಗೆ ಸಾರಿಗೆ ವ್ಯವಸ್ಥೆ ಮಾಡುವಂತೆ ಆಯೋಜಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.ಹೋಟೆಲ್, ರೆಸ್ಟೋರೆಂಟ್ ಮಾಲೀಕರೊಂದಿಗೆ ಸಭೆ ನಡೆಸಿದ ಪೊಲೀಸ್ ಇಲಾಖೆ ಕೆಲವು ಗೈಡ್ಲೈನ್ಸ್ ಹೊರಡಿಸಿದೆ. ಹಾಗೂ ತಾವು ಆಯೋಜಿಸುವ ಕಾರ್ಯಕ್ರಮದ ಭದ್ರತಾ ಸಿಬ್ಬಂದಿಯ ವಿರುದ್ಧ ಯಾವುದೇ ಕ್ರಿಮಿನಲ್ ಆರೋಪಗಳಿವೆಯೇ ಎಂದು ಪರಿಶೀಲಿಸಲು ತಿಳಿಸಲಾಗಿದೆ. ಇದಕ್ಕಾಗಿ ಸೇವಾ ಸಿಂಧು ಆಯಪ್ ಬಳಸಲು ಪೊಲೀಸರು ಸೂಚಿಸಿದ್ದಾರೆ.ಈಗಾಗಲೇ ಬಹುತೇಕ ಸ್ಥಳಗಳು ಹೊಸ ವರ್ಷಕ್ಕೆ ಬರದ ಸಿದ್ದತೆ ಗಳು ಮಾಡಿಕೋಂಡಿರುವ ಆಯೋಜಕರು ಹೊಸ , ಹೊಸ ಸ್ಕೀಮ್‌ಗಳನ್ನ ನೀಡುತ್ತಿದ್ದಾರೆ.