Webdunia - Bharat's app for daily news and videos

Install App

ಗರುಡಾ ಮಾಲ್ ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಮೆರಗು

ಗರುಡಾ ಮಾಲ್
Webdunia
ಬುಧವಾರ, 22 ಡಿಸೆಂಬರ್ 2021 (19:43 IST)
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ನಗರದ ಗರುಡಾ ಮಾಲ್ ಸನ್ನದ್ಧವಾಗಿದ್ದು, ಜನವರಿ 2 ರ ವರೆಗೆ ನಗರದ ಜನರಿಗೆ 10 ದಿನಗಳ ಕಾಲ ಕೇಕ್ ಶೋ ಮತ್ತು ಕ್ರಿಸ್ಮಸ್ ಸಂತೆ ಕೈ ಬೀಸಿ ಕರೆಯುತ್ತಿದೆ. ಗರುಡಾ ಮಾಲ್ ನ 16 ನೇ ವರ್ಷದ ಪ್ರದರ್ಶನದಲ್ಲಿ ಮಧ್ಯಕಾಲೀನ ಯುಗದ ಕೋಟೆಯನ್ನು ಪ್ರತಿಬಿಂಬಿಸುವ “ಮಿಡಿವಲ್ ಕ್ಯಾಸಲ್” ಕೇಕ್ ಶೋ ಆಕರ್ಷಣೆಯಾಗಿದೆ. 16 ಅಡಿ ಎತ್ತರದ ಮತ್ತು 16 ಮತ್ತು 16 ಅಡಿ ವಿಸ್ತೀರ್ಣದ ಕೇಕ್ ಶೋ ಪ್ರತಿಕೃತಿ ಗಮನ ಸೆಳೆಯುತ್ತಿದೆ. ಮೊಂಬತ್ತಿಗಳ ಅಲಂಕಾರದಿಂದ ಮಿಡೀವಲ್ ಕ್ಯಾಸಲ್ ಕೋಟೆ ಕಂಗೊಳಿಸುತ್ತಿದೆ.
 
ಚಿತ್ರನಟಿ, ರಂಗಿ ತರಂಗ ಚಿತ್ರದ ಖ್ಯಾತಿಯ ನಾಯಕಿ ರಾಧಿಕ ನಾರಾಯಣ್ ಕೇಕ್ ಶೋ ಉದ್ಘಾಟಿಸಿದರು. ವರ್ಷಾಂತ್ಯದಲ್ಲಿ ವಿಶೇಷವಾಗಿ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರನ್ನು ಈ ಪ್ರದರ್ಶನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
 
ಪ್ರತಿಷ್ಠಿತ ವಾಣಿಜ್ಯ ಮಳಿಗೆ ‘ಗರುಡಾ ಮಾಲ್’ ಮನೋರಂಜನೆ ಜೊತೆಯಲ್ಲೇ ವ್ಯಾಪಾರ ಉತ್ತೇಜಿಸುವ ವಿನೂತನ ಮಾದರಿಯನ್ನು ಪರಿಚಯಿಸಿದವರಲ್ಲಿ ಮೊದಲಿಗರು. ಕಳೆದ 16 ವರ್ಷಗಳಲ್ಲಿ ವಿಶೇಷ ರೀತಿಯಲ್ಲಿ ಕ್ರಿಸ್‍ಮಸ್ ಮತ್ತು ಹೊಸವರ್ಷಾಚರಣೆಯನ್ನು ಗ್ರಾಹಕರಿಗೆ ಪರಿಚಯಿಸಿದೆ.
 
ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ವೈಭವದ ಮೆಲಕು ಹಾಕುತ್ತ ‚ಮಿಡೀವಲ್ ಕ್ಯಾಸಲ್’ನ ವಿಧವಿಧ ಕೇಕುಗಳ ಮಾದರಿಯನ್ನು ಆಸ್ವಾದಿಸಲು ವೇದಿಕೆಯಾಗಿದೆ.‚ಮಿಡೀವಲ್ ಕ್ಯಾಸಲ್‛ 16’ ಎತ್ತರ  16 ಉದ್ದ 12’ ಅಗಲದ ಕ್ಯಾಸಲ್ ಮಾಲ್‍ನ ಒಳಗೆ ಬರಲಿದೆ. ಇವೆಲ್ಲದರ ಜೊತೆಗೆ ಏಳು ಅಡಿ ಎತ್ತರದ ನಾಲ್ಕು ಕೋಟೆ ಬುರುಜುಗಳು, ಸಾಂತಾಕ್ಲಾಸ್ ಮತ್ತು ಮಿಕ್ಕಿಮೌಸ್ ಮಾದರಿಯ ಕೇಕುಗಳು ಮಾಲ್‍ನ ವಿವಿಧ ಅಂತಸ್ತುಗಳಲ್ಲಿ ಅನಾವರಣಗೊಂಡಿವೆ. ಕ್ರಿಸ್ ಮಸ್ ಕೇಕ್ ನಲ್ಲಿರುವ ಚೆರ್ರಿ ಯೂರೋಪಿಯನ್ ಶೈಲಿಯದ್ದಾಗಿದೆ. ಗ್ರಾಹಕರು ಕ್ರಿಸ್ಮಸ್ ಕುರಿತ ಗುಡಿಗಳನ್ನು ಸಹ ಮನೆಗೆ ಕೊಂಡೊಯ್ಯಬಹುದಾಗಿದೆ.
 
 
ಮಾಲ್‌ಗೆ ಬರುವ ಗ್ರಾಹಕರು ತಮಗಿಷ್ಟವಾದ ರೀತಿಯಲ್ಲಿ ಕೇಕುಗಳನ್ನು ತಯಾರಿಸಿಕೊಡುವ ವಿಶೇಷ ಕೌಂಟರ್ ಇರಲಿದೆ. ಕುಟುಂಬದ ಸದಸ್ಯರೆಲ್ಲ ಸಂತೋಷದಿಂದ ಗರುಡಾ ಮಾಲ್‌ಗೆ ಆಹ್ವಾನಿಸುವುದು ಇದರ ಮುಖ್ಯಧ್ಯೇಯವಾಗಿದೆ. 24 ರಿಂದ 26 ರ ವರೆಗೆ ಆಯ್ದ ಮಳಿಗೆಗಳಲ್ಲಿ ಶೇ 50 ರಿಯಾಯಿತಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
 
ಕೇಕ್ ಕಲಾವಿದರಾದ ಷರೀಪ್, ಫಾತಿಮಾ ಸೇರಿ 12 ಮಂದಿ ಆಯ್ಕೆಯಾದರು ಮಿಡಿವಲ್ ಕೇಕ್ ಅನ್ನು ಕೇವಲ 3 ದಿನಗಳಲ್ಲಿ ನಿರ್ಮಿಸಿದ್ದಾರೆ. 100 ಕೆ.ಜಿ. ತೂಕದ ಸೈನಿಕರನ್ನು ಚಾಕೋಲೆಟ್ ನಿರ್ಮಿಸಲಾಗಿದೆ. ಇದಕ್ಕಾಗಿ ಎರಡು ಸಾವಿರ ಮೊಟ್ಟೆಗಳು, 800 ಕೆ.ಜಿ. ಸ್ಪಂಜ್ ಪೂರಕಗಳನ್ನು ಬಳಸಲಾಗಿದೆ ಎಂದು ಕೇಕ್ ಶೋ ಆಯೋಜಕ ನರೇಂದ್ರ ಭಾಟಿಯಾ ಹೇಳಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

DGP Om Prakash Rao ಹತ್ಯೆಯಾಗಿದ್ದು ಹೇಗೆ, ಪತ್ನಿ ಪಲ್ಲವಿ ಹೇಳಿದ್ದು ಕೇಳಿದರೆ ಬೆಚ್ಚಿ ಬೀಳ್ತೀರಿ

DK Shivakumar: ಡಿಕೆ ಶಿವಕುಮಾರ್ ಟೆಂಪಲ್ ರನ್ ಹಿಂದಿದೆ ಭಾರೀ ಲೆಕ್ಕಾಚಾರ: ಬಿಜೆಪಿಗೆ ಗಡ ಗಡ

Karnataka Weather: ರಾಜ್ಯದಲ್ಲಿ ಈ ವಾರ ಮಳೆಯಿರಲಿದೆಯೇ ಇಲ್ಲಿದೆ ಸಂಪೂರ್ಣ ಹವಾಮಾನ ವರದಿ

DGP Om Prakash Rao: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ: ಪತ್ನಿ ಪಲ್ಲವಿ ಮೇಲೆ ಅನುಮಾನ ಬಂದಿದ್ದು ಈ ಮೂರು ಕಾರಣಕ್ಕೆ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ಮುಂದಿನ ಸುದ್ದಿ
Show comments