Daily Horoscope

Chinnaswamy stampede: ಅಣ್ಣಾವ್ರು ತೀರಿಕೊಂಡಾಗಲೂ ಹೀಗೇ ಆಗಿತ್ತು

Krishnaveni K
ಗುರುವಾರ, 5 ಜೂನ್ 2025 (08:31 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಬಳಿ ನಡೆದ ಕಾಲ್ತುಳಿತ ಘಟನೆ ಈ ಹಿಂದೆ ಅಣ್ಣಾವ್ರು ತೀರಿಕೊಂಡಾಗಲೂ ನಡೆದಿತ್ತು. ಆಗಲೂ ಅಭಿಮಾನಿಗಳು ಸಾಗರದಂತೆ ನುಗ್ಗಿದಾಗ ಪೊಲೀಸರು ಅಸಹಾಯಕರಾದರು.

ಐಪಿಎಲ್ ಗೆದ್ದು ಆರ್ ಸಿಬಿ ತವರಿಗೆ ಬರುತ್ತದೆ ಎಂದಾಗ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸಾವಿರ ಸಂಖ್ಯೆಯಲ್ಲಿ ಬರಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅಭಿಮಾನಿಗಳ ಸಂಖ್ಯೆ ಲಕ್ಷ ದಾಟಿತ್ತು. ಅದೂ ಮೈದಾನಕ್ಕೆ ಉಚಿತ ಪಾಸ್ ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿದಾಗ ಅಭಿಮಾನಿಗಳು ಹುಚ್ಚೆದ್ದು ನುಗ್ಗಿದರು.

ಮೈದಾನಕ್ಕೆ ಅಭಿಮಾನಿಗಳನ್ನು ಬಿಡಲು ಸೂಕ್ತ ವ್ಯವಸ್ಥೆ ಮಾಡಲಿಲ್ಲ. ಸಾಮಾನ್ಯವಾಗಿ ಪಂದ್ಯ ನಡೆಯುವಾಗ ಟಿಕೆಟ್ ಪರಿಶೀಲಿಸಿ ಒಬ್ಬೊಬ್ಬರನ್ನೇ ಒಳಗೆ ಬಿಡಲಾಗುತ್ತದೆ. ಆದರೆ ಈಗ ಹಾಗೆ ಮಾಡದೇ ಒಟ್ಟಿಗೇ ಜನ ನುಗ್ಗಿದ್ದರಿಂದ ದುರಂತ ಸಂಭವಿಸಿದೆ.

ಏಕಾಏಕಿ ಲಕ್ಷಾಂತರ ಮಂದಿ ಅಭಿಮಾನಿಗಳು ನುಗ್ಗಿದಾಗ ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರೂ ಏನೂ ಮಾಡಲಾಗಲಿಲ್ಲ. ಈ ಹಿಂದೆ ಡಾ. ರಾಜ್ ಕುಮಾರ್ ತೀರಿಕೊಂಡಾಗಲೂ ಪೊಲೀಸರಿಗೆ ಇದೇ ಅಸಹಾಯಕತೆ ಎದುರಾಗಿತ್ತು. ಏಕಾಏಕಿ ಅಭಿಮಾನಿ ದೇವರುಗಳು ನುಗ್ಗಿ ಬಂದಾಗ ಏನು ಮಾಡಬೇಕೆಂದು ತಿಳಿಯದೇ ಪೊಲೀಸರು ಅಸಹಾಯಕರಾಗಿ ಕೈ ಚೆಲ್ಲಿ ಕೂತರು.  ಈಗಲೂ ಅದೇ ಸಮಸ್ಯೆ ಎದುರಾಗಿದೆ. ಈ ಘಟನೆ ಪೊಲೀಸರಿಗೆ, ಆಯೋಜಕರಿಗೆ ಮತ್ತು ಸರ್ಕಾರಕ್ಕೆ ಒಂದು ಪಾಠವಾಗಲಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments