Select Your Language

Notifications

webdunia
webdunia
webdunia
webdunia

ಭಾರತ ಪ್ರವಾಸ ಮಾಡದಂತೆ ನಾಗರಿಕರಿಗೆ ಚೀನಾ ಸರಕಾರ ಸಲಹೆ

ಭಾರತ ಪ್ರವಾಸ ಮಾಡದಂತೆ ನಾಗರಿಕರಿಗೆ ಚೀನಾ ಸರಕಾರ ಸಲಹೆ
ಬೀಜಿಂಗ್ , ಶನಿವಾರ, 8 ಜುಲೈ 2017 (15:29 IST)
ಭಾರತ ಮತ್ತು ಚೀನಾ ಗಡಿಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಭಾರತ ಪ್ರವಾಸವನ್ನು ಮುಂದೂಡುವಂತೆ ತನ್ನ ನಾಗರಿಕರಿಗೆ ಚೀನಾ ಸಲಹೆ ನೀಡಿದೆ.
 
ಭಾರತದ ಪ್ರವಾಸದಲ್ಲಿರುವ ಚೀನಾ ನಾಗರಿಕರು ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರುವಂತೆ ಸರಕಾರ ನಿರ್ದೇಶನ ನೀಡಿದೆ. ಭಾರತ ಪ್ರವಾಸವನ್ನು ಮುಂದೂಡುವುದೆ ಸೂಕ್ತ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
 
ಭಾರತದ ಗಡಿಯೊಳಗೆ ಚೀನಿ ಸೈನಿಕರು ನುಗ್ಗುವುದನ್ನು ತಡೆದ ಭಾರತೀಯ ಸೈನಿಕರ ವಿರುದ್ಧ ಚೀನಾ ಸರಕಾರ ಆಕ್ರೋಶ ವ್ಯಕ್ತಪಡಿಸಿದೆ. ಯುದ್ಧ ಬೇಕೋ ಅಥವಾ ಶಾಂತಿ ಬೇಕೋ ಎನ್ನುವ ದುರಹಂಕಾರದ ಹೇಳಿಕೆ ನೀಡಿ ಭಾರತವನ್ನು ಕೆಣಕಿದೆ.
 
ಚೀನಾ ಸರಕಾರ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತ ಅನಗತ್ಯವಾಗಿ ಭೂತಾನ್ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಗಲಾಟೆ ನಿಯಂತ್ರಿಸಲು ಸರಕಾರ ವಿಫಲ: ಈಶ್ವರಪ್ಪ