Select Your Language

Notifications

webdunia
webdunia
webdunia
webdunia

ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು ನಾಪತ್ತೆ

ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು ನಾಪತ್ತೆ
ಹುಬ್ಬಳ್ಳಿ , ಮಂಗಳವಾರ, 5 ಜುಲೈ 2016 (11:51 IST)
ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳಿಬ್ಬರು ಏಕಾಏಕಿ ನಾಪತ್ತೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

ನಾಗಶೆಟ್ಟಿಕೊಪ್ಪ ಪ್ರದೇಶದ ಹಳಿಯಾಳ್ ಬಿಲ್ಡಿಂಗ್ ನಿವಾಸಿಗಳಾಗಿದ್ದ ಸಂಜಯ್ ಹಾಗೂ ಶಾವನ್ ದಂಪತಿಯ ಮಕ್ಕಳಾದ 
ಶೃತಿ(೫) ಮತ್ತು ಝಾನ್ಸಿ (೧೧) ನಿನ್ನೆ ಸಂಜೆ ೭ ಘಂಟೆ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದರು. ತಾಯಿ ಒಳಗಡೆ ಕೆಲಸದಲ್ಲಿ ವ್ಯಸ್ತರಾಗಿದ್ದು ಸ್ವಲ್ಪ ಸಮಯದ ಬಳಿಕ ಹೊರ ಬಂದು ನೋಡಿದರೆ ಮಕ್ಕಳಿಬ್ಬರು ಅಲ್ಲಿರಲಿಲ್ಲ .
 
ಸಂಜಯ್ ಖಾಸಗಿ ಕಂಪಯಲ್ಲಿ ಕೆಲಸ ಮಾಡುತ್ತಿದ್ದು ತಮಿಳುನಾಡು ಮೂಲದವರಾಗಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ಪೋಷಕರು ಅವರನ್ನು ಹುಡುಕುತ್ತ ಪರದಾಡುತ್ತಿದ್ದು ಘಟನೆಯಿಂದ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ. 
 
ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೆನೋವೋ ಐಡಿಯಾಪ್ಯಾಡ್ ವೈ-700 ಲ್ಯಾಪ್‌ಟಾಪ್ ಮಾರುಕಟ್ಟೆಗೆ!