Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ಅಡಳಿತ ತೃಪ್ತಿದಾಯಕವಲ್ಲ: ಸಿಎಂ ಇಬ್ರಾಹಿಂ

ಸಿಎಂ ಸಿದ್ದರಾಮಯ್ಯ ಅಡಳಿತ ತೃಪ್ತಿದಾಯಕವಲ್ಲ: ಸಿಎಂ ಇಬ್ರಾಹಿಂ
ಮೈಸೂರು , ಭಾನುವಾರ, 23 ಅಕ್ಟೋಬರ್ 2016 (17:45 IST)
ಕಳೆದ ಹಲವು ದಶಕಗಳಿಂದ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ಸ್ನೇಹಿತನಾಗಿದ್ದೇನೆ. ಅವರು ಅಂದು ತೋರುತ್ತಿದ್ದ ಖಡಕ್ ನಡೆಗಳು ಇಂದು ಮಾಯವಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.
 
ಕಾಲ ಕಾಲಕ್ಕೆ ವ್ಯವಸ್ಥೆ ಬದಲಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ತಮ್ಮ ನಡೆ ನುಡಿಯಲ್ಲಿ ಬದಲಾವಣೆ ತಂದುಕೊಂಡಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಬದಲಾಗುತ್ತಿದ್ದಾರೆ. ಅದರಂತೆ ವ್ಯವಸ್ಥೆ ಕೂಡಾ ಬದಲಾಗುತ್ತಿದೆ. ಹಿಂದಿನ ಜನಪರ ಕಾಳಜಿ ದಿನಗಳೆದಂತೆ ಮಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಸಿಎಂ ಸಿದ್ದರಾಮಯ್ಯ ದಕ್ಷ ಮುಖ್ಯಮಂತ್ರಿ ಆದರೆ, ಅವರಲ್ಲಿರುವ ಅಧಿಕಾರಿಗಳಿಗೆ ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಕಠಿಣ ಸಂದೇಶಗಳನ್ನು ರವಾನಿಸುವಲ್ಲಿ ವಿಫಲವಾಗಿದ್ದಾರೆ. ಇದರಿಂದಾಗಿ ಅಡಳಿತ ಯಂತ್ರ ಕುಸಿದಿದೆ ಎಂದರು.
 
ಕೆಲ ಸಚಿವರು ತಮ್ಮ ತಮ್ಮ ಇಚ್ಚೆಗೆ ವರ್ತಿಸುತ್ತಿರುವದರಿಂದ ಜನಸಾಮಾನ್ಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಮುಂಬರುವ 20 ತಿಂಗಳಲ್ಲಾದರೂ ಸಿದ್ದರಾಮಯ್ಯ ಉತ್ತಮವಾಗಿ ಕಾರ್ಯನಿರ್ವಹಿಸಿ ಜನಪರ ಸಮಸ್ಯೆಗಳನ್ನು ಈಡೇರಿಸಲಿ ಎನ್ನುವುದೇ ನಮ್ಮ ಬಯಕೆಯಾಗಿದೆ ಎಂದು ತಿಳಿಸಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಆಪ್ತ ಸ್ನೇಹಿತರು. ಆಪ್ತ ಸ್ನೇಹಿತನಾಗಿ ಕೆಲವು ಸಲಹೆಗಳನ್ನು ನೀಡಿದ್ದೇನೆ. ಪಾಲಿಸುವುದು ಬಿಡುವುದು ಅವರಿಗೆ ಬಿಟ್ಟ ಸಂಗತಿಯಾಗಿದೆ ಎಂದು ಹೇಳಿದ್ದಾರೆ.  
 
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಭೀಷ್ಮರಾಗಿರುವ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ಜನಾನುರಾಗಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಿತ್ತು ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
 
ಸಿಎಂ ಇಬ್ರಾಹಿಂ ಹೇಳಿಕೆಯನ್ನು ಗಮನಿಸಿದಲ್ಲಿ ಮುಂಬರುವ ಚುನಾವಣೆಯಲ್ಲಿ ಸಿ.ಎಂ.ಇಬ್ರಾಹಿಂ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲಿದ್ದಾರೆಯೇ ಅನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಉ.ಪ್ರದೇಶ: ಮತ್ತೆ ಸಮಾಜವಾದಿ ಪಕ್ಷದಲ್ಲಿ ತಾರಕಕ್ಕೇರಿದ ಭಿನ್ನಮತ