ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾರೇ ಮಾತನಾಡಿದರು ಉಗ್ರಪ್ಪ ಮಧ್ಯ ಪ್ರವೇಶಿಸುತ್ತಾರೆ. ಉಗ್ರಪ್ಪನವರಿಗೆ ಮುಖ್ಯಮಂತ್ರಿಯವರು ಪವರ್ ಆಫ್ ಅಟಾರ್ನಿ ನೀಡಿರಬೇಕು. ಬೇಕಿದ್ದರೆ ಮುಖ್ಯಮಂತ್ರಿಯವರು ಉಗ್ರಪ್ಪರನ್ನು ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ನ್ಯಾಯಮೂರ್ತಿ ಎಸ್.ಆರ್.ನಾಯಕ್ ನೇಮಕವಾದ ಬಳಿಕ ರಾಜ್ಯ ಸರಕಾರ ಎಸಿಬಿಯನ್ನು ರದ್ದುಮಾಡಲು ಸಂಚು ರೂಪಿಸಿದೆ. ರಾಜ್ಯದ ಕೆಲವು ವಿಧೇಯಕಗಳು ವಾಪಸ್ ಬರುತ್ತಿದೆ. ರಾಜ್ಯ ಸರಕಾರ ಮತ್ತು ರಾಜ್ಯಪಾಲರ ನಡುವಣ ಸಂವಹನದ ಕೊರತೆಯಿಂದ ಅನೇಕ ವಿಧೇಯಕಗಳು ವಾಪಸ್ ಬರುತ್ತಿವೆ ಎಂದು ಆರೋಪಿಸಿದರು.
ರಾಜಭವನದಿಂದ ವಿಧೇಯಕಗಳು, ಸುಗ್ರಿವಾಜ್ಞೆಗಳು ವಾಪಸ್ ಆಗುತ್ತಿರುವ ಕುರಿತಂತೆ ರಾಜ್ಯದ ಸಚಿವರುಗಳು, ರಾಜ್ಯಪಾಲರಿಗೆ ಸ್ಪಷ್ಟ ವಿವರಣೆ ನೀಡಲಿ. ಇತ್ತೀಚಿಗೆ ಸಚಿವರು ರಾಜಭವನಕ್ಕೆ ಹೋಗುವುದೇ ಅಪರೂಪವಾಗಿದೆ. ಆದರೆ, ಕಾಂಗ್ರೆಸ್ ಮುಖಂಡ ಉಗ್ರಪ್ಪ ರಾಜ್ಯಪಾಲರ ವಿರುದ್ಧ ಅನಗತ್ಯ ವಾಗ್ದಾಳಿ ನಡೆಸುತ್ತಿದ್ದಾರೆ. ಇಂತವರಿಂದಲೇ ಸರಕಾರ ಹಾಳಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನೂತನ ಲೋಕಾಯುಕ್ತರ ಆಯ್ಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಹೆಸರನ್ನೇ ಶಿಫಾರಸ್ಸು ಮಾಡುತ್ತಿರುವುದರ ಹಿಂದೆ ದುರುದ್ದೇಶವಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.