Select Your Language

Notifications

webdunia
webdunia
webdunia
webdunia

ಜಾತಿ– ಜಾತಿಗಳ ನಡುವೆ ಬೆಂಕಿಯಿಡುವ ಮುಖ್ಯಮಂತ್ರಿ– ಆರ್.ಅಶೋಕ್

ಜಾತಿ– ಜಾತಿಗಳ ನಡುವೆ ಬೆಂಕಿಯಿಡುವ ಮುಖ್ಯಮಂತ್ರಿ– ಆರ್.ಅಶೋಕ್
ಮೈಸೂರು , ಭಾನುವಾರ, 31 ಡಿಸೆಂಬರ್ 2017 (14:45 IST)
ವೀರಶೈವ– ಲಿಂಗಾಯತರ ಬಿರುಕು ಮೂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜಾತಿಗಳ ನಡುವೆ ಬೆಂಕಿ ಇಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಆರೋಪಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತರ ಸಮುದಾಯವನ್ನು ಒಡೆದಿರುವ ಮುಖ್ಯಮಂತ್ರಿ ಮತ್ತೆ ಅಧಿಕಾರಕ್ಕೆ ಬಂದರೆ ಬೇರೆ ಸಮುದಾಯಗಳನ್ನು ಒಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಜಾತಿಗಳ ನಡುವೆ ಬೆಂಕಿ ಇಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಕಾರಣಕ್ಕೂ ಮತ್ತೆ ಅಧಿಕಾರ ನೀಡಬಾರದು ಎಂದಿದ್ದಾರೆ.
 
ಬೇರೆ ಪಕ್ಷದಿಂದ ಬಂದಿರುವ ಸಿದ್ದರಾಮಯ್ಯ ತನ್ನ ಸಾಮ್ರಾಜ್ಯ ನಿರ್ಮಿಸಿಕೊಳ್ಳಲು ಮೂಲ ಕಾಂಗ್ರೆಸ್‌ನವರನ್ನು ತುಳಿದಿದ್ದಾರೆ. ಮುಂದಿನ ತಿಂಗಳಲ್ಲಿ ಕಾಂಗ್ರೆಸ್‌ನಿಂದ ಹಲವು ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವಿವರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಳು ಹೇಳಿ ಮೋಸ ಮಾಡುತ್ತಿರುವ ಸಿದ್ದರಾಮಯ್ಯ– ಶ್ರೀರಾಮುಲು