Publish Date: Sun, 23 Sep 2018 (16:56 IST)
Updated Date: Sun, 23 Sep 2018 (16:58 IST)
ಕೋಳಿಗಳನ್ನು ತುಂಬಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಹೊಡೆದಿದೆ.
ಕೋಳಿಗಳನ್ನು ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿರುವ ಘಟನೆ ಬೆಂಗಳೂರು
ಹೊರವಲಯ ಆನೇಕಲ್ ಸಮೀಪದ ಗುಡ್ನಹಳ್ಳಿ ಕೆರೆಯ ಬಳಿ ನಡೆದಿದೆ.
ಭಾನುವಾರದ ಕಾರಣ ಚಿಕನ್ ಅಂಗಡಿಗಳಿಗೆ ಸಾಗಾಟ ಮಾಡಲು ಬೆಂಗಳೂರಿನಿಂದ ಹೊಸೂರು ಮಾರ್ಗವಾಗಿ ಆನೇಕಲ್ ಕಡೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ. ಕ್ಯಾಂಟರ್ ನಲ್ಲಿದ್ದ ಚಾಲಕ ಪ್ರಾಣಾಪಾಯದಿಂದ ಪರಾಗಿದ್ದಾನೆ.
ವಾಹನದಲ್ಲಿದ್ದ ಸಾವಿರಾರು ಕೋಳಿಗಳು ಸಾವಿಗೀಡಾಗಿದ್ದು, ಸ್ಥಳಕ್ಕೆ ಆನೇಕಲ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.