ಕಾರವಾರ: ತಾಲ್ಲೂಕಿನ ಬಿಣಗಾದಲ್ಲಿರುವ ಆದಿತ್ಯ ಬಿರ್ಲಾ ಗ್ರುಪ್‌ಗೆ ಸೇರಿರುವ ಗ್ರಾಸಿಮ್ ಇಂಡಸ್ಟ್ರೀಸ್'ನ ಕಾಸ್ಟಿಕ್ ಸೋಡಾ ಉತ್ಪಾದನಾ ಘಟಕದಲ್ಲಿ ರಾಸಾಯನಿಕ ಸೋರಿಕೆಯಾಗಿ 18ಮಂದಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
ತಾಂತ್ರಿಕ ಸಮಸ್ಯೆಯಾಗಿ ರಾಸಾಯನಿಕ ಸೋರಿಕೆಯಾಗಿದೆ. ನೀಲಕಂಠ (22), ಜಹಾನೂರ (20), ಕಮಲೇಶ ವರ್ಮಾ (22), ನಂದಕಿಶೋರ (21), ದೀಪು (28), ಅಜೀಜ್ (23), ಕಲ್ಲು (37), ಸುಜನ್ (26), ನಜೀದುಲ್ಲಾ (24), ಬೇಜನಕುಮಾರ್ (27), ಕಿಶನ್ ಕುಮಾರ್ (28), ಮೋಹಿತ್ ವರ್ಮಾ (21) ಹಾಗೂ ಇತರ ಆರು ಮಂದಿ ಅಸ್ವಸ್ಥಗೊಂಡರು.
ಅವರ ಪೈಕಿ ನಾಲ್ವರಿಗೆ ಕಂಪನಿಯ ಆವರಣದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. 14 ಮಂದಿಯನ್ನು ಕ್ರಿಮ್ಸ್‌ಗೆ ಕಳಿಸಲಾಗಿದೆ ಎಂದು ತಿಳಿಸಿದರು.
ಕಣ್ಣು ಉರಿ ಉಂಟಾಗಿ, ಉಸಿರಾಟ ಸಮಸ್ಯೆಯಿಂದ ಕೆಲವು ಕಾರ್ಮಿಕರು ಬಳಲಿದ್ದರು. ತಕ್ಷಣ ಅವರನ್ನು ಘಟಕದಿಂದ ಹೊರಕ್ಕೆ ಕರೆತರಲಾಯಿತು' ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದರು.