Webdunia - Bharat's app for daily news and videos

Install App

ಚನ್ನಪಟ್ಟಣ ರೋಡ್ ಶೋನಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಹುಡುಕಬೇಕು ಅಷ್ಟು ಜನ

Krishnaveni K
ಶುಕ್ರವಾರ, 25 ಅಕ್ಟೋಬರ್ 2024 (16:11 IST)
ಚನ್ನಪಟ್ಟಣ: ಇಲ್ಲಿನ ವಿಧಾನಸಭಾ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಇಂದು ರೋಡ್ ಶೋ ನಡೆಸಿದ್ದರು. ಈ ವೇಳೆ ಜನಸಾಗರವೇ ಕಂಡುಬಂದಿತ್ತು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಇಲ್ಲಿಂದ ಸಿಪಿ ಯೋಗೇಶ್ವರ್ ಸ್ಪರ್ಧಿಸುತ್ತಿದ್ದಾರೆ. ನಿನ್ನೆ ಅವರು ರೋಡ್ ಶೋ ಬಳಿಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಸಾಥ್ ನೀಡಿದ್ದರು. ಇಂದು ನಿಖಿಲ್ ಕುಮಾರಸ್ವಾಮಿ ಶಕ್ತಿ ಪ್ರದರ್ಶನ ನೀಡಿದ್ದಾರೆ.

ಆದರೆ ಇಂದು ನಿಖಿಲ್ ರೋಡ್ ಶೋ ವೇಳೆ ನಿನ್ನೆಗಿಂತ ಹೆಚ್ಚು ಜನ ಸೇರಿದ್ದಂತೆ ಕಂಡುಬಂದಿತ್ತು. ಹೀಗಾಗಿ ಈವತ್ತು ರೋಡ್ ಶೋನಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎನ್ನುವ ಸ್ಥಿತಿಯಿತ್ತು. ಇದಕ್ಕೆ ಬಿಜೆಪಿ-ಜೆಡಿಎಸ್ ಅಭಿಮಾನಿಗಳು ಒಗ್ಗರಣೆ ಹಾಕಿದ್ದಾರೆ. ನೋಡಿ ನಿನ್ನೆ ಡಿಕೆಶಿ, ಸಿದ್ದರಾಮಯ್ಯ ಬಂದರೂ ಜನ ಬರಲಿಲ್ಲ. ಇಂದು ನಿಖಿಲ್ ರೋಡ್ ಶೋಗೆ ಇಷ್ಟೊಂದು ನೋಡಿದ್ರೆ ನಿಖಿಲ್ ಈ ಬಾರಿ ಗೆಲ್ಲೋದು ಪಕ್ಕಾ ಎಂದಿದ್ದಾರೆ.

ಅವರ ರೋಡ್ ಶೋನಲ್ಲಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಮಾತ್ರವಲ್ಲದೆ, ದೋಸ್ತಿ ಪಕ್ಷವಾದ ಬಿಜೆಪಿಯ ಆರ್ ಅಶೋಕ್, ಡಿವಿ ಸದಾನಂದ ಗೌಡ, ಡಾ ಸಿಎನ್ ಅಶ್ವತ್ಥ ನಾರಾಯಣ, ಮೈಸೂರು ಸಂಸದ ಯದುವೀರ್ ಒಡೆಯರ್ ಮೊದಲಾದವರು ಭಾಗಿಯಾಗಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಶೂ ಹಾಕಿಕೊಂಡು ಹೋಮದಲ್ಲಿ ಪಾಲ್ಗೊಂಡ ಲಾಲೂ ಯಾದವ್

ಧರ್ಮಸ್ಥಳ ಅನಾಮಿಕ ದೂರುದಾರನ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಎಸ್ಐಟಿ

ಶಕ್ತಿ ಯೋಜನೆಗೆ ರೆಕಾರ್ಡ್ ಹಾಗಿರ್ಲಿ, ಸಾರಿಗೆ ನೌಕರರಿಗೆ ಸಂಬಳ ಹಾಕಿ: ಸಿಎಂಗೆ ನೆಟ್ಟಿಗರ ಕ್ಲಾಸ್

ಶಕ್ತಿ ಯೋಜನೆ ಗೋಲ್ಡನ್ ಬುಕ್ ರೆಕಾರ್ಡ್ ಪಟ್ಟಿಗೆ: ಸಿದ್ದರಾಮಯ್ಯ ಖುಷಿಗೆ ಹೇಳಿದ್ದೇನು ನೋಡಿ

ಮೋದಿ, ಪುಟಿನ್ ಭಾರೀ ಫ್ರೆಂಡ್ಸ್ ಎನ್ನುವುದಕ್ಕೆ ಇದೇ ಸಾಕ್ಷಿ

ಮುಂದಿನ ಸುದ್ದಿ
Show comments