Select Your Language

Notifications

webdunia
webdunia
webdunia
webdunia

ಚನ್ನಪಟ್ಟಣ ಉಪಚುನಾವಣೆ: ಬರೋಬ್ಬರಿ 29ಕೋಟಿ ಮೌಲ್ಯದ ಮದ್ಯ ವಶ

Karnataka By Election 2024, Chennapattana By Election, Excise Department Officer

Sampriya

ಚನ್ನಪಟ್ಟಣ , ಮಂಗಳವಾರ, 12 ನವೆಂಬರ್ 2024 (18:33 IST)
ಚನ್ನಪಟ್ಟಣ: ಕರ್ನಾಟಕ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಾಳೆ ಉಪಚುನಾವಣೆ ನಡೆಯಲಿದ್ದು, ಇದೀಗ ನಾಯಕರು ಗೆಲುವಿಗಾಗಿ ಅಂತಿಮ ಹಂತದ ಸಿದ್ಧತೆಯನ್ನು ಮಾಡುತ್ತಿದ್ದಾರೆ.

ಇದೀಗ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹೈವೋಲ್ಟೇಜ್‌ ಕ್ಷೇತ್ರದವಾದ ಚನ್ನಪಟ್ಟಣ ಕ್ಷೇತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಬರೋಬ್ಬರಿ 29 ಕೋಟಿ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಒಂದು ತಿಂಗಳಲ್ಲಿ ಒಟ್ಟು 29 ಕೋಟಿ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಚನ್ನಪಟ್ಟಣ ಚುನಾವಣೆ ಘೋಷಣೆಯಾದ ಬಳಿಕ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.ಇದುವರೆಗೆ 151 ಪ್ರಕರಣಗಳನ್ನು ಅಬಕಾರಿ ಇಲಾಖೆ ದಾಖಲಿಸಿಕೊಂಡಿದೆ.

ಇನ್ನು ಅಬಕಾರಿ ಇಲಾಖೆ ಮದ್ಯದ ಜತೆಗೆ ಅದನ್ನು ಸಾಗಿಸಲು ಬಳಸಿದ್ದ ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.  ದಾಖಲೆ ಹಾಗೂ ಪರವಾನಿಗೆ ಇಲ್ಲದೆ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಯಾವುದೇ ದಾಖಲೆ ಹಾಗೂ ಪರವಾನಿಗೆಲ್ಲದೆ ಸಂಗ್ರಹಿಸಿಟ್ಟಿದ್ದ ಮಧ್ಯವನ್ನು ಜಪ್ತಿ ಮಾಡಿಕೊಂಡಿರುವ ಕುರಿತು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಯನ್ನು ನಿಂದಿಸಿದ ಸಚಿವ ಜಮೀರ್‌ ಅಹ್ಮದ್ ವಿರುದ್ಧ ದೂರು