Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ವಿಚಾರ; ಸೋನಿಯಾ ಗಾಂಧಿ ಪರ ಬ್ಯಾಟ್ ಬೀಸಿದ ಸಿದ್ದರಾಮಯ್ಯ

ನವದೆಹಲಿ
ನವದೆಹಲಿ , ಸೋಮವಾರ, 24 ಆಗಸ್ಟ್ 2020 (09:44 IST)
ನವದೆಹಲಿ : ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ಒತ್ತಾಯ ಕೇಳಿಬಂದಿದ್ದು, ನಾಯಕತ್ವ ಬದಲಾಗಬೇಕೆಂದು ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ  ಸೋನಿಯಾ ಗಾಂಧಿ ಪರ ಬ್ಯಾಟ್ ಬೀಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ‘ಕಾಂಗ್ರೆಸ್ ಈಗ ತೀವ್ರ ಸಂಕಷ್ಟದ ಸಂದರ್ಭವನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಪ್ರಶ್ನಿಸೋದು ಸರಿಯಲ್ಲ. ಅದರಲ್ಲೂ ಗಾಂಧಿ ಕುಟುಂಬದ  ನಾಯಕತ್ವವನ್ನು ಪ್ರಶ್ನೆ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.

ಅಲ್ಲದೇ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಏರ್ಪಟ್ಟಿರುವ ಸ್ಥಿತಿ ಇದೆ. ಬಿಜೆಪಿ ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡ್ತಿರುವ ವೇಳೆ ಇದು. ಇಂತ ಸಮಯದಲ್ಲಿ ಕಾಂಗ್ರೆಸ್ ಬಲಪಡಿಸೋ ಕೆ;ಸ ಮಾಡಬೇಕು. ಅದನ್ನ ಹೊರತುಪಡಿಸಿ ಕಾಂಗ್ರೆಸ್ ಬಲಹೀನವಾಗಲು ಬಿಡಬಾರದು ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮಾಲೀಕನ ಪತ್ನಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ಯುವಕ