Select Your Language

Notifications

webdunia
webdunia
webdunia
webdunia

ಅನ್ನಭಾಗ್ಯ ಯೋಜನೆಯಲ್ಲಿ ಮಹತ್ತರ ಬದಲಾವಣೆ ಏನಿದು ಇಲ್ಲಿದೆ ವಿವರ

Rice

Krishnaveni K

ಬೆಂಗಳೂರು , ಬುಧವಾರ, 14 ಆಗಸ್ಟ್ 2024 (12:19 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಇನ್ನು ಮುಂದೆ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಸಚಿವ ಕೆಎಚ್ ಮುನಿಯಪ್ಪ ಸುಳಿವು ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಸಿದ್ದರಾಮಯ್ಯ ಸರ್ಕಾರ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಿತ್ತು. ಆದರೆ ಅಕ್ಕಿಯ ಅಭಾವದಿಂದಾಗಿ 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿ ಅಕ್ಕಿಯ ಬಾಬ್ತು ಫಲಾನುಭವಿಗಳ ಖಾತೆಗೆ ಹಣ ನೀಡಲಾಗುತ್ತಿತ್ತು. ಆದರೆ ಇದೀಗ 5 ಕೆಜಿ ಅಕ್ಕಿಯ ಹಣದ ಬದಲು ಇತರೆ ವಸ್ತುಗಳನ್ನು ನೀಡುವ ಸಾಧ್ಯತೆಯಿದೆ.

ಇನ್ನುಳಿದ 5 ಕೆಜಿ ಅಕ್ಕಿಯ ಬದಲು ಹಣ ಪಡೆಯುವುದಕ್ಕಿಂತ ಬೇಳೆ, ಸಕ್ಕರೆ, ಎಣ್ಣೆ ಇತ್ಯಾದಿ ವಸ್ತುಗಳನ್ನು ನೀಡಬೇಕು ಎಂದು ಜನ ಬೇಡಿಕೆಯಿಡುತ್ತಿದ್ದಾರಂತೆ. ಹೀಗಾಗಿ ಇನ್ನು ಮುಂದೆ ಹಣದ ಬದಲು ಬೇರೆ ವಸ್ತುಗಳನ್ನು ನೀಡಲು ಚಿಂತನೆ ನಡೆಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದಾರೆ.

ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ಖಾತೆ ಸಚಿವ ಪ್ರಲ್ಹಾದ್ ಜೋಶಿಯವರನ್ನು ಭೇಟಿ ಮಾಡಿ ಮುನಿಯಪ್ಪ ಮಾತುಕತೆ ನಡೆಸಿದ್ದಾರೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ಒದಗಿಸಲು ಕೇಂದ್ರದ ಸಹಾಯ ಕೋರಿದ್ದಾರೆ. ರಾಜ್ಯದ ಜನರ ಅವಶ್ಯಕತೆಗೆ ಅನುಗುಣವಾಗಿ ಅಕ್ಕಿ ಖರೀದಿಸಲಿದ್ದೇವೆ ಎಂದು ಮುನಿಯಪ್ಪ ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿರೂರಿನಲ್ಲಿ ಅರ್ಜುನನಿಗಾಗಿ ಇಂದು ಮತ್ತೆ ಹುಡುಕಾಟಕ್ಕೆ ಸಿಕ್ಕಿದೆ ಮಹತ್ವದ ಮುನ್ನಡೆ