Daily Horoscope

Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯಂತಹ ದುರಂತ ನಾಯಕನ ಸಹಸವಾಸ ಮಾಡಿ ಖರ್ಗೆಯವರೂ ಹೀಗಾದ್ರು: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy
ಬೆಂಗಳೂರು: ರಾಹುಲ್ ಗಾಂಧಿಯವರಂತಹ ದುರಂತ ನಾಯಕನ, ದುರಂತ ನಾಯಕರ ಸಹವಾಸ ಮಾಡಿ, ಮೋದಿಜೀ ಅವರನ್ನು ಮಲ್ಲಿಕಾರ್ಜುನ ಖರ್ಗೆಯವರು ಟೀಕಿಸಿ ಹೇಳಿಕೆ ನೀಡಿದ್ದು ಅಕ್ಷಮ್ಯ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
 
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಲು ಬಿಜೆಪಿ ವತಿಯಿಂದ ಇಂದು ಫ್ರೀಡಂ ಪಾರ್ಕಿನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ಸಿನಲ್ಲಿ ಕಳಪೆ ನಾಯಕತ್ವ ಇದೆ. ಅದಕ್ಕೆ ಅನುಗುಣವಾಗಿ ವ್ಯವಸ್ಥೆಯೂ ಕಳಪೆ ಎಂದು ಹೇಳಿದರು.
 
ಖರ್ಗೆ ಅವರಿಗೆ ಧಿಕ್ಕಾರ ಹೇಳಲೇಬೇಕು ಎಂದ ಅವರು, ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಮೇಲೆ ಹತಾಶವಾಗಿ ನಾಲಿಗೆಗೂ ಕೂಡ ಇತಿಮಿತಿ ಇಲ್ಲದೆ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನ ಪ್ರತಿಯೊಬ್ಬ ನಾಯಕರೂ ಭಾರತೀಯ ಜನತಾ ಪಕ್ಷದ ಸ್ಟಾರ್ ಕ್ಯಾಂಪೇನರ್ ಗಳ ಹಾಗೆ ಆದಂಗೆ ಕಾಣುತ್ತಿದೆ ಎಂದು ವಿಶ್ಲೇಷಿಸಿದರು. ಈ ರೀತಿ ನಿಂದನೆಯಿಂದ ನಿಮ್ಮ ಮತಬ್ಯಾಂಕ್ ಬೆಳೆಯುವುದೇ ಎಂದು ಕೇಳಿದರು.
 
ಮತಗಳ್ಳತನ ಎಲ್ಲಿ ಆಗಿದೆ?
ಬಿಜೆಪಿಯನ್ನು ಸುಭದ್ರಗೊಳಿಸಲಿಕ್ಕೆ ನೀವೇ ಪ್ರಯತ್ನ ಮಾಡಿದಂತೆ ಕಾಣುತ್ತಿದೆ.  ವೋಟ್ ಚೋರಿ, ವೋಟ್ ಚೋರಿ, ವೋಟ್ ಚೋರಿ... ಎಲ್ಲಪ್ಪಾ ನಿಮ್ಮದು ಮತಗಳ್ಳತನ ಆಗಿದೆ ಎಂದು ಪ್ರಶ್ನಿಸಿದರು. ಜನರೇ ‘ನಾವು ಚೋರರಿಗೆ ವೋಟ್ ಹಾಕ್ತಾ ಇಲ್ಲ' ಅಂತ ಹೇಳುತ್ತಿದ್ದಾರೆ ಎಂದು ವಿವರಿಸಿದರು.
 
ಖರ್ಗೆ ಅªರೇ, ಯಾಕೆ ನೀವು ಇಷ್ಟೊಂದು ಕನಿಷ್ಠ ಮಟ್ಟಕ್ಕೆ ಇಳಿದಿದ್ದೀರಿ? ಯಾರನ್ನ ಓಲೈಕೆ ಮಾಡಲು ಹೋಗುತ್ತೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು. ದೇವೇಗೌಡರು ಪ್ರಧಾನಿಯಾದಾಗ
ಕರ್ನಾಟಕದವರೆಂದು ಸಂತಸ ಪಟ್ಟಿದ್ದೆವು. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ
ಖರ್ಗೆಯವರು ಆದಾಗ ನಾವು ಖುಷಿಪಟ್ಟೆವು. ಆದರೆ ನೀವು ಈ ಮಟ್ಟಕ್ಕೆ ಇಳಿದು ಮಾತಾಡಿದ್ದು ಸರಿಯಲ್ಲ. ಮೋದಿಯವರು ನಿಮಗೆ ಮಾಡಬಾರದ್ದನ್ನು ಮಾಡಿದ್ದೇನು? ಎಂದು ಕೇಳಿದರು. ಮೋದೀಜೀ ಅವರು ಇಡೀ ಪ್ರಪಂಚದಲ್ಲಿ ನಾಯಕತ್ವವನ್ನು ಕೊಟ್ಟು, ಹೊರದೇಶಗಳಿಂದಲೂ ಪ್ರಶಂಸೆ ಪಡೀತಾ ಇರುವುದರಿಂದ ನಿಮಗೆ ಹತಾಶೆ ಆಗಿದೆಯೇ ಎಂದು ಕೇಳಿದರು.
 
ಆರೆಸ್ಸೆಸ್ ಅಪ್ಪಟ ಭಾರತೀಯ. ಹಾಗೇ ಬಿಜೆಪಿ ಅಪ್ಪಟ ಭಾರತೀಯ. ಕಾಂಗ್ರೆಸ್ಸು ಕಟ್ಟಿದವರು ಭಾರತೀಯರೇ ಎಂದು ಕೇಳಿದರು. ಕಾಂಗ್ರೆಸ್ಸು ಬ್ರಿಟಿಷರದು, ಅದರ ನಾಯಕತ್ವ ಇಟೆಲಿಯದು ಎಂದು ಗಮನ ಸೆಳೆದರು. ನೀವೆಷ್ಟೇ ನಮ್ಮನ್ನು ನಿಂದಿಸಿದರೂ ನಿಮಗೆ ಸೊಪ್ಪು ಹಾಕುವವರಿಲ್ಲ ಎಂದು ನುಡಿದರು. ನಿಮ್ಮ ಭಾಷಣಕ್ಕೆ ಜನ ಕಡಿಮೆ ಆಗಲು ಮೋದಿಜೀ ಅವರು ಕಾರಣವೇ ಎಂದು ಪ್ರಶ್ನೆ ಹಾಕಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪ, ಮಗ ಇಬ್ರೂ ಸರಿಯಿಲ್ಲ, ಖರ್ಗೆ ಬಾಯಿ ಫಿನಾಯಿಲ್ ಹಾಕಿ ತೊಳೆಯಬೇಕು: ಆರ್ ಅಶೋಕ್ ವಾಗ್ದಾಳಿ