Daily Horoscope

Select Your Language

Notifications

webdunia
webdunia
webdunia
webdunia

ಬಿಜೆಪಿ, ಆರ್ ಎಸ್ಎಸ್ ನ್ನು ಓಡಿಸಬೇಕು ಎನ್ನಲು ಹರಿಪ್ರಸಾದ್ ಯಾವ ದೊಣ್ಣೆ ನಾಯಕ: ಛಲವಾದಿ

Chalavadi Narayanaswamy
ಬೆಂಗಳೂರು: ಆರೆಸ್ಸೆಸ್ಸಿನವರದು ದೊಣ್ಣೆ ಅಲ್ಲ; ಅದು ಪಥಸಂಚಲನದ ಗಣವೇಷದ ಭಾಗ ಅಷ್ಟೇ. 100 ವರ್ಷಗಳ ಕಾಲದಲ್ಲಿ ಗಣವೇಷ ಇಟ್ಟುಕೊಂಡು ಯಾರಿಗೂ ಮೋಸ, ಅನ್ಯಾಯ, ವಂಚನೆ ಮಾಡಿದ್ದಿಲ್ಲ. ಆ ದೊಣ್ಣೆಯಿಂದ ಒಬ್ಬರನ್ನು ಥಳಿಸಿದ್ದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದ್ದಾರೆ. 
 
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ನೀಡಿದರು. ಬೆಂಗಳೂರು ಬಿಟ್ಟು ಯಾರನ್ನಾದರೂ ಯಾರಾದರೂ ಓಡಿಸಲು ಸಾಧ್ಯ ಇದೆಯೇ ಎಂದು ಕೇಳಿದರು. ಅವರ ಕಾಲ ಒಂದಿತ್ತು. ತಳವಾರು ಹಿಡಿದು ಓಡಾಡುತ್ತಿದ್ದ ಕಾಲ ಅದು ಎಂದು ವ್ಯಂಗ್ಯವಾಡಿದರು. ಈಗ ಅದನ್ನು ಹಿಡಿದು ಓಡಾಡಲು ಅವರಿಗೆ ಆಗುವುದಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು. ಆರೆಸ್ಸೆಸ್ ವಿರುದ್ಧ ಕಾಂಗ್ರೆಸ್ಸಿನ ಕಪೋಲಕಲ್ಪಿತ ಹೇಳಿಕೆ ಬಿಟ್ಟರೆ ಯಾವುದೇ ಕೇಸ್ ಕೂಡ ಇಲ್ಲ. ಆರೆಸ್ಸೆಸ್ ಅನ್ನು ಕಟ್ಟಾ ವಿರೋಧಿಸುವವರು ಈಗ ಗೃಹ ಸಚಿವರಾಗಿದ್ದಾರೆ. ಆರೆಸ್ಸೆಸ್ ವಿರುದ್ಧ ಯಾವುದೇ ಕೇಸ್ ಬಾಕಿ ಇಲ್ಲ ಎಂದು ಅವರೇ ಹೇಳಿದ್ದಾರೆ ಎಂದು ನುಡಿದರು. ಅಂದಮೇಲೆ ಹರಿಪ್ರಸಾದ್ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿದೆಯೇ ಎಂದು ಕೇಳಿದರು.
 
ಇದು ತಳವಾರು ಕಾಲ ಅಲ್ಲ; ಈಗ ವಂದೇ ಮಾತರಂ. ಸದನದಲ್ಲಿ ಪೂರ್ಣ ಹಾಡನ್ನು ಹಾಡುತ್ತಿದ್ದೆವು. ಅದನ್ನು ಕಾಂಗ್ರೆಸ್ ನಿಲ್ಲಿಸಿದ್ದೇಕೆ ಎಂದು ಪ್ರಶ್ನೆ ಹಾಕಿದರು. ಇದರಿಂದ ಭಂಡತನ ಪ್ರದರ್ಶನ ಆಗಿದೆ. ಅದು ನಿಮ್ಮಲ್ಲಿನ ದೋಷ ಎಂದು ಆಕ್ಷೇಪಿಸಿದರು.
 
ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರಿಂದ ಒಳ್ಳೆಯದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೊಡಿ, ಬಡಿ, ಕಡಿ ಸಂಸ್ಕøತಿ ಅವರದು. ನಿನ್ನೆಯ ನನ್ನ ಎಸ್‍ಐಆರ್ ಹೇಳಿಕೆ ಸಂಬಂಧ ಮನೆಗೆ ಕಲ್ಲೆಸೆಯಲು ಪುಡಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಳಿಸಿದ್ದಾರೆ ಎಂದು ದೂರಿದರು.
ಪಶ್ಚಿಮ ಬಂಗಾಲದ ನಂತರ ಹೆಚ್ಚು ಬಾಂಗ್ಲಾ ದೇಶೀಯರು ಕರ್ನಾಟಕದಲ್ಲಿದ್ದಾರೆ. ಕಾಂಗ್ರೆಸ್ಸಿನವರೇ ಅವರಿಗೆ ಅವಿತುಕೊಳ್ಳಲು ಅವಕಾಶ ನೀಡುತ್ತಿದ್ದಾರೆ. ಕಾಫಿ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ಬಾಂಗ್ಲಾ ದೇಶದವರಿದ್ದಾರೆ. ಹೋಟೆಲ್ ಕಾರ್ಮಿಕರಾಗಿಯೂ ಇದ್ದಾರೆ. ಬೆಂಗಳೂರು, ಶಿವಮೊಗ್ಗ, ಧಾರವಾಡ, ಗುಲ್ಬರ್ಗದಲ್ಲಿ ಇದ್ದು ಎಲ್ಲ ಕಡೆ ಇದ್ದಾರೆ. ಅವರು ಕಾಂಗ್ರೆಸ್ಸಿಗೆ ಅತಿ ಪ್ರಿಯರು ಎಂದು ಆಕ್ಷೇಪಿಸಿದರು.
 
ಕೇರಳದಲ್ಲಿ ಎಸ್‍ಐಆರ್ ಆದುದರಿಂದ ಅನುಕೂಲ ಆಗಿದೆ ಎಂದು ರಮೇಶ್ ಚೆನ್ನಿತ್ತಲ ಹೇಳಿಕೆ ಕೊಟ್ಟಿದ್ದಾರೆ. ಕಮ್ಯುನಿಸ್ಟರ ಬೋಗಸ್ ಮತದಾನಕ್ಕೆ ತಡೆ ಆಗಿದೆ. ನಮಗೆ ಸುಲಭ ಆದುದಾಗಿ ಹೇಳಿದ್ದಾರೆ. ಅಲ್ಲಿ ನೀವ್ಯಾಕೆ ಮತಗಳ್ಳತನದ ಮಾತೇ ಆಡಿಲ್ಲ ಎಂದು ಟೀಕಿಸಿದರು.
 
ಕರ್ನಾಟಕದಲ್ಲಿ 136 ಸೀಟು ಗೆದ್ದಿದ್ದೀರಿ. ಮತಗಳ್ಳತನ ಆದುದಾಗಿ ಒಂದು ದಿನವೂ ನೀವು ಹೇಳಿಲ್ಲ ಎಂದು ಆರೋಪಿಸಿದರು. ತೆಲಂಗಾಣದಲ್ಲಿ ನೀವೇ ಗೆದ್ದಾಗ ಮತಗಳ್ಳತನ ಎಂಬ ಮಾತನಾಡಿಲ್ಲ ಎಂದು ದೂರಿದರು. ದೇಶದಲ್ಲಿ ಮತಗಳ್ಳತನ ಆಗಿಲ್ಲ; ಕಾಂಗ್ರೆಸ್ಸಿನ ಚೋರರಿಗೆ ಮತದಾರರು ಮತ ಹಾಕಿಲ್ಲ ಎಂದು ವಿಶ್ಲೇಷಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ತೋಟದಲ್ಲೇ ಕಾಂಗ್ರೆಸ್ ಪಾದಯಾತ್ರೆ ಕಹಳೆ: 84 ಸೋತ ಕ್ಷೇತ್ರಗಳಲ್ಲಿ ಭಾರತ ಜೋಡೋ 2.0 ಆರಂಭ