Select Your Language

Notifications

webdunia
webdunia
webdunia
webdunia

ನಿಮ್ಮ ಪರಿಸ್ಥಿತಿಯನ್ನ ಕಲ್ಪಿಸಿಕೊಳ್ಳಿ, ಶರತ್ ವಿಷಯವಾಗಿ ಸಿಎಂಗೆ ಟ್ವೀಟ್ ಮಾಡಿದ ಸದಾನಂದಗೌಡ

ನಿಮ್ಮ ಪರಿಸ್ಥಿತಿಯನ್ನ ಕಲ್ಪಿಸಿಕೊಳ್ಳಿ, ಶರತ್ ವಿಷಯವಾಗಿ ಸಿಎಂಗೆ ಟ್ವೀಟ್ ಮಾಡಿದ ಸದಾನಂದಗೌಡ
ಬೆಂಗಳೂರು , ಸೋಮವಾರ, 10 ಜುಲೈ 2017 (11:37 IST)
ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಸಾವನ್ನಪ್ಪಿದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರು ಸಿಎಂ ಸಿದ್ದರಾಮಯ್ಯನವರಿಗೆ ಟ್ವಿಟ್ಟರ್`ನಲ್ಲಿ ಒತ್ತಾಯಿಸಿದ್ದಾರೆ.
 

ಮಾನ್ಯ ಮುಖ್ಯಮಂತ್ರಿಗಳೇ ನಾವಿಬ್ಬರೂ ಸಮಾನ ದುಃಖಿಗಳೆಂದು ಒಂದು ಸಂದರ್ಭದಲ್ಲಿ ಹೇಳಿದ್ದೆ. ಮೃತ ಶರತ್ ತಂದೆ ಸ್ಥಾನದಲ್ಲಿ ನಿಮ್ಮನ್ನ ನೀವು ಕಲ್ಪಿಸಿಕೊಳ್ಳಿ. ಶರತ್`ನ ತಂದೆಯ ಮುಖವನ್ನ ನೋಡಿದರೆ ತುಂಬಾ ಸಂಕಟವಾಗುತ್ತದೆ. ನಿಮಗೇನೂ ಅನ್ನಿಸುತ್ತಿಲ್ಲವಾದರೆ ಅದನ್ನ ಯೋಜಿತ ಕೃತ್ಯವೆಂದು ತಿಳಿಯಲಾ..? ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ. 

ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್`ನಲ್ಲಿ ಜುಲೈ 4ರಂದು ಶರತ್ ಮಡಿವಾಳಗೆ ದುಷ್ಕರ್ಮಿಗಳು ಚಾಕು ಇರಿದಿದ್ದರು. ಜುಲೈ 7ರಂದು ಎ.ಜೆ. ಆಸ್ಪತ್ರೆಯಲ್ಲಿ ಶರತ್ ಕೊನೆಯುಸಿರೆಳೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಮಲಬಾರ್ ಎಕ್ಸರ್ಸೈಸ್: ಭಾರತ-ಅಮೆರಿಕ- ಜಪಾನ್‌ ಸಮರಾಭ್ಯಾಸ ಆರಂಭ