Select Your Language

Notifications

webdunia
webdunia
webdunia
webdunia

ಶಶಿಕಲಾಗೆ ವಿಶೇಷ ಕಿಚನ್, ವಿಐಪಿ ಸೌಲಭ್ಯ: ಜೈಲಿನ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ..?

ಶಶಿಕಲಾಗೆ ವಿಶೇಷ ಕಿಚನ್, ವಿಐಪಿ ಸೌಲಭ್ಯ: ಜೈಲಿನ ಕರ್ಮಕಾಂಡ ಬಿಚ್ಚಿಟ್ಟ ಡಿಐಜಿ..?
ಬೆಂಗಳೂರು , ಗುರುವಾರ, 13 ಜುಲೈ 2017 (09:37 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಣ್ಣ ಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಜೈಲಿನಲ್ಲಿ ವಿಐಪಿ ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ಻ಕ್ರಮ ಸೌಲಭ್ಯಕ್ಕಾಗಿ ಅಧಿಕಾರಿಗಳಿಗೆ ಅಪಾರ ಪ್ರಮಾಣದ ಲಂಚ ನೀಡಿದ್ದಾರೆ ಎಂದೂ ಸಹ ಆರೋಪ ಕೇಳಿಬಂದಿದೆ.
 


ಕಾರಾಗೃಹದ ಡಿಐಜಿ ರೂಪಾ ತನ್ನ ಮೇಲಧಿಕಾರಿ ಕಾರಾಗೃಹದ ಡಿಜಿಪಿ ಎಚ್`ಎಸ್ಎನ್ ರಾವ್ ಅವರಿಗೆ ನೀಡಿರುವ ವರದಿಯಲ್ಲಿ ವಿ.ಕೆ. ಶಶಿಕಲಾಗೆ ವಿಶೇಷ ಅಡುಗೆ ಮನೆ ಸೇರಿದಂತೆ ಇತರೆ ಸೌಲಭ್ಯಗಳನ್ನ ಕಾನೂನು ಬಾಹಿರವಾಗಿ ನೀಡಲಾಗುತ್ತಿದೆ ಎಂದು ಉಲ್ಲೇಖಿಸಿರುವುದಾಗಿ ಸಿಎನ್ಎನ್`-ನ್ಯೂಸ್ 18 ವರದಿ ಮಾಡಿದೆ.  

ಈ ಅಕ್ರಮ ಸೌಲಭ್ಯಗಳನ್ನ ಪಡೆಯಲು ಶಶಿಕಲಾ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದೂ ಆರೋಪಿಸಲಾಗಿದೆ. ಇದರ ಜೊತೆಗೆ ನಕಲಿ ಛಾಪಾ ಕಾಗದ ಹಗರಣದಲ್ಲಿ ಜೈಲು ಸೇರಿರುವ ಕರೀಂ ಲಾಲ ತೆಲಗಿಗೂ ವಿಐಪಿ ಸವಲತ್ತು ಸಿಗುತ್ತಿದ್ದು, ವಿಚಾರಣಾಧೀನ ಕೈದಿಗಳನ್ನ ಮಸಾಜ್ ಮಾಡಲು ನೇಮಿಸಲಾಗಿದೆ ಎಂದು ವರದಿಯಾಗಿದ

ನ್ಯೂಸ್-18 ವರದಿ ಮಾಡಿರುವಂತೆ ರೂಪಾ ವರದಿಯಲ್ಲಿ ಉಲ್ಲೇಕಿಸಿರುವ ಕೆಲ ಻ಂಶಗಳು ಇಲ್ಲಿವೆ
ಜೈಲಿನ ನಿಯಮ ಉಲ್ಲಂಘಿಸಿ ಶಶಿಕಲಾಗೆ ವಿಶೇಷ ಅಡುಗೆ ಮನೆ ಸೌಲಭ್ಯ.
ಈ ಸೌಲಭ್ಯ ಪಡೆಯಲು 2 ಕೋಟಿ ರೂ. ಲಂಚ ನೀಡಿರುವ ವದಂತಿ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆಗೆ ಆಯ್ತು, ಇದೀಗ ಮಹಿಳೆಯದ ಆ ದಿನಕ್ಕೂ ರಜೆ!