Select Your Language

Notifications

webdunia
webdunia
webdunia
webdunia

ಸುಪ್ರೀಂಕೋರ್ಟ್ ಕಾವೇರಿ ವಿಷಯದಲ್ಲಿ ರಾಜ್ಯ ಬಲಿಪಶು: ಶೆಟ್ಟರ್

ಸುಪ್ರೀಂಕೋರ್ಟ್ ಕಾವೇರಿ ವಿಷಯದಲ್ಲಿ ರಾಜ್ಯ ಬಲಿಪಶು: ಶೆಟ್ಟರ್
ಬೆಂಗಳೂರು , ಸೋಮವಾರ, 3 ಅಕ್ಟೋಬರ್ 2016 (17:28 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿಲನ್ ಅಲ್ಲ, ವಿಕ್ಟಿಮ್ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದರು. 
 
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ಅಪರಾಧಿಯಾಗಿ ನಿಂತಿದೆ. ಸುಪ್ರೀಂಕೋರ್ಟ್ ಆದೇಶದಂತೆ ಈಗ ತಮಿಳುನಾಡಿಗೆ ನೀರು ಬಿಡದಿದ್ದರೆ ಅಕ್ಟೋಬರ್ 18 ರಂದು ನಡೆಯುವ ವಿಶೇಷ ಮೇಲ್ಮನವಿ ವಿಚಾರಣೆಯಲ್ಲಿ ರಾಜ್ಯಕ್ಕೆ ಬಾರಿ ನಷ್ಟವಾಗುತ್ತದೆ ಎಂದು ಹೇಳಿದರು.
 
ನ್ಯಾಯಾಲಯದ ಐ ತೀರ್ಪು ಪ್ರತ್ನಿಸಿ ಎಸ್‌ಎಲ್ಐಪಿ ಸಲ್ಲಿಸಲಾಗಿದೆ. ಈಗ ರಾಜ್ಯ ಸರಕಾರ ಸುಪ್ರೀಂ ಆದೇಶ ಪಾಲಿಸಲೇಬೇಕಾದ ಸ್ಥಿತಿ ಎದುರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
 
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಕಾನೂನು ಹೋರಾಟ ನಡೆಸುವಲ್ಲಿ ಎಡವಿದೆ. ಎಲ್ಲಿ ತಪ್ಪು ನಡೆದಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್, ಗೋವಾ ಆಯ್ತು, ಮತ್ತೀಗ ಗುಜರಾತ್, ಹಿಮಾಚಲದ ಕಡೆ ಆಪ್ ಕಣ್ಣು