ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ಹಾಗೂ ಬಂದ್ ಆಚರಣೆಸುವಂತಿಲ್ಲ ಎಂದು ನಿನ್ನೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದೆ. ಆದರೂ, ಇಂದು ತಮಿಳುನಾಡಿನಲ್ಲಿ ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಆಚರಿಸಲಾಗುತ್ತಿದೆ. ತಮಿಳುನಾಡು ಬಂದ್ ಹಿನ್ನೆಲೆಯಲ್ಲಿ ಬಸ್, ಆಟೋ ಸೇರಿದಂತೆ ಸಂಪೂರ್ಣ ವಹಿವಾಟು ಸ್ಥಗಿತಗೊಂಡಿದೆ.
16 ಸಾವಿರ ಖಾಸಗಿ ಶಾಲೆಗಳು ಸೇರಿದಂತೆ 4600 ಪೆಟ್ರೋಲ್ ಬಂಕ್ ಮುಚ್ಚಿದೆ. 21 ಲಕ್ಷ ಅಂಗಡಿ ಮುಗಟ್ಟುಗಳು ಸಂಪೂರ್ಣ ವ್ಯಾಪರ ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ತಮಿಳುನಾಡಿನಲ್ಲಿ ಬಂದ್ ಆಚರಣೆ ಹಿನ್ನೆಲೆಯಲ್ಲಿ ಕರ್ನಾಟಕ-ತಮಿಳುನಾಡು ನಡುವಿನ ಬಸ್ ಸಂಚಾರ ಗುರುವಾರದಿಂದಲೇ ಸ್ಥಗಿತಗೊಳಿಸಲಾಗಿದೆ.
ತಮಿಳುನಾಡಿನಲ್ಲಿ ಬಂದ್ ಆಚರಿಸುತ್ತಿರುವುದರಿಂದ ಮುಂಚಾಗ್ರತಾ ಕ್ರಮವಾಗಿ ಕರ್ನಾಟಕದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ