Publish Date: Fri, 29 Sep 2023 (21:05 IST)
Updated Date: Fri, 29 Sep 2023 (19:07 IST)
ಕಾಂಗ್ರೆಸ್ ಎಂದೂ ನಾಡಿನ ವಿಚಾರವಾಗಿ ದ್ರೋಹ ಮಾಡಿಲ್ಲ. ಆದ್ರೆ ಬಿಜೆಪಿಯೇ ನಾಡದ್ರೋಹಿ ಪಕ್ಷ. ಬಿಜೆಪಿ ಆಡಳಿತದ ಅವಧಿಯಲ್ಲೇ ಪ್ರಾಧಿಕಾರ ರಚನೆಯಾಗಿದೆ. ಇವರು ಅಧಿಕಾರಕ್ಕೆ ಬಂದು 9 ವರ್ಷಗಳು ಆದರೂ ಯಾಕೆ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತಿಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತ್ರ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.ಇದೇ ವೇಳೆ ಹೋರಾಟಗಾರರಿಗೆ ಮನವಿ ಮಾಡಿದ ಸಚಿವರು ಯಾರೂ ಕೂಡ ಕಲ್ಲು ತೂರಾಟ ಮಾಡಬಾರದು. ಬಂದ್ ಪರವಾಗಿ ಎಲ್ಲ ಜನ ಇದ್ದಾರೆ. ಜನರು ರಾಜ್ಯ ಸರ್ಕಾರದ ವಿರುದ್ಧ ಬಂದ್ ಮಾಡುತ್ತಿಲ್ಲ. ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿಕಾರಿದ್ದಾರೆ.