Select Your Language

Notifications

webdunia
webdunia
webdunia
webdunia

ಕಾವೇರಿ ಹೋರಾಟಗಾರರ ಕೇಸ್ ವಾಪಸ್ ಪಡೆಯಿರಿ: ಪರಮೇಶ್ವರ್‌ಗೆ ಎಸ್‍.ಎಂ. ಕೃಷ್ಣ ಸಲಹೆ

ಕಾವೇರಿ ಹೋರಾಟಗಾರರ ಕೇಸ್ ವಾಪಸ್ ಪಡೆಯಿರಿ: ಪರಮೇಶ್ವರ್‌ಗೆ ಎಸ್‍.ಎಂ. ಕೃಷ್ಣ ಸಲಹೆ
ಬೆಂಗಳೂರು , ಗುರುವಾರ, 22 ಸೆಪ್ಟಂಬರ್ 2016 (14:19 IST)
ಕಾವೇರಿ ಹೋರಾಟದಲ್ಲಿ ಬಂಧನಕ್ಕೂಳಗಾಗಿರುವ ಹೋರಾಟಗಾರರ ಮೇಲೆ ಹೂಡಿರುವ ಕೇಸ್‌ಗಳನ್ನು ವಾಪಸ್ ಪಡೆಯುಂತೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಪತ್ರ ಬರೆದಿದ್ದಾರೆ.
 
ಕಾವೇರಿ ಹೋರಾಟದಲ್ಲಿ ಬಂಧನಕ್ಕೂಳಗಾಗಿರುವ ರೈತರು ಹಾಗೂ ಹೋರಾಟಗಾರರಲ್ಲಿ ಬಹುತೇಕ ಜನರು ಅಮಾಯಕರಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಗೃಹ ಸಚಿವರ ಬಳಿ ಮನವಿ ಮಾಡಿದ್ದಾರೆ. 
 
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ, ರಾಜ್ಯಾದ್ಯಂತ ಪ್ರತಿಭಟನೆ ನಡೆದಿದ್ದವು. ಪ್ರತಿಭಟನಾಕಾರರ ಆಕ್ರೋಶಕ್ಕೆ ರಾಜ್ಯದಲ್ಲಿ ಅಶಾಂತಿ ಮೂಡಿದ ಹಿನ್ನೆಲೆಯಲ್ಲಿ ಕಾವೇರಿ ಹೋರಾಟಗಾರರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಿಓಕೆಗೆ ನುಗ್ಗಿದ ಭಾರತೀಯ ಸೇನೆ: 20 ಪಾಕ್ ಉಗ್ರರ ಮಾರಣಹೋಮ