Select Your Language

Notifications

webdunia
webdunia
webdunia
webdunia

ಬೆಕ್ಕಿಗೆ ಸಂತಾನ‌ಹರಣ‌ !

ಬೆಕ್ಕಿಗೆ ಸಂತಾನ‌ಹರಣ‌ !
bangalore , ಬುಧವಾರ, 28 ಜುಲೈ 2021 (18:54 IST)
ಬಿ.ಬಿ.ಎಂ.ಪಿ  ವ್ಯಾಪ್ತಿಯಲ್ಲಿ  ಬೀದಿ ಬೆಕ್ಕುಗಳಿಗೆ ಮತ್ತು ಮನೆಯ ಬೆಕ್ಕುಗಳಿಗೆ ಸಂತಾನಹರಣ ಚಿಕಿತ್ಸೆ  ನಡೆಸಲು ಬಿ.ಬಿ.ಎಂ.ಪಿ ಅರಣ್ಯ ಇಲಾಖೆ ರೂಪುರೇಶೆ ಸಿದ್ದಪಡಿಸುತ್ತಿದೆ  .ನಗರದಲ್ಲಿ  ದಿನೇ‌ದಿನೇ‌ಬೆಕ್ಕುಗಳ‌ ಸಂಖ್ಯೆ ಹೆಚ್ಚಾಗುತ್ತಿದೆ.ಒಂದು‌ಬೆಕ್ಕು 7ರಿಂದ‌ 8 ಬೆಕ್ಕುಗಳಿಗೆ‌  ಜನ್ಮ‌ನೀಡುತ್ತದೆ.ಉಂಡಾಡಿ‌ ಬೆಕ್ಕುಗಳ ಕಾಟ ದಿಂದ‌ ಸಾರ್ವಜನಿಕರು ಬೇಸತ್ತು ಬಿ.ಬಿ.ಎಂ.ಪಿ ಗೆ ದೂರು ನೀಡುತ್ತಿದ್ದಾರೆ.ಬೀದಿ‌ನಾಯಿಗಳಿಗೆ ಮರಿ ಹಾಕದಂತೆ ಆಪರೇಷನ್ ಮಾಡುವ ಕೆಲಸ‌ಪಾಲಿಕೆ ವತಿಯಿಂದ  ಹಲವಾರು ವರುಷಗಳಿಂದ ನಡೆಯುತ್ತ ಬಂದಿದೆ.ಈಗ‌‌ ಬೆಕ್ಕಿನ‌‌ ಸರದಿ.ಪಾಲಿಕೆ ಬಜೆಟ್ ನಲ್ಲಿ  ಹಣ‌ ಇಟ್ಟಿಲ್ಲ.ಬೆಕ್ಕಿಗೆ‌ ಗಂಟೆ‌‌ಕಟ್ಟುವರ್ಯಾರು.ಬಿ.ಬಿ.ಎಂ.ಪಿ ಅರಣ್ಯ ಇಲಾಖೆಯ‌ ಅದಿಕಾರಿಗಳಿಗೆ ತಲೆನೋವಾಗಿದೆ. ಮತ್ತೊಂದು‌ಕಡೆ ನಗರದಲ್ಲಿ ಮಂಗಗಳ ಕಾಟ ಸಹ ವಿಪರೀತವಾಗಿದೆ.ಒಂದು‌ ಲಕ್ಷ‌ ಮಂಗಗಳು‌ ಇದೆಯೆಂದು ಅಂದಾಜಿಸಲಾಗಿದೆ. ಜೆ.ಪಿ‌ ನಗರ.ಬಸವನಗುಡಿ  ಕೆ.ಆರ್ ಪುರಂ .ಬನ್ನೇರ ಘಟ್ಟ ಪುಟ್ಟೇನ ಹಳ್ಳಿ ಈ ಬಡಾವಣೆಗಳಲ್ಲಿ ಅಪಾರ್ಟ್ ಮೆಂಟ್ ಗಳಲ್ಲಿ ಕೋತುಗಳ  ಕಾಟ .ಅದನ್ನು ಕಟ್ಟಿಹಾಕಲು ಜಾಗಕ್ಕಾಗಿ ಬಿ.ಬಿ.ಎಂ.ಪಿ  ಶೋದ ನಡೆಸುತ್ತಿದೆ.ಮಂಗಗಳಿಗಾಗಿ‌ ಉದ್ಯಾನವನ್ನು‌ನಿರ್ಮಿಸಲು ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕತಿರುಪತಿ ದೇವಾಲಯದಲ್ಲಿ ಹುಂಡಿ ಎಣಿಕೆ