ರಾಜಕೀಯ ಉದ್ದೇಶಕ್ಕೆ ನನ್ನ ಮೇಲೆ ಕೇಸ್

Webdunia
ಶನಿವಾರ, 5 ಆಗಸ್ಟ್ 2023 (15:40 IST)
ಹಿರಿಯರು, ಮುತ್ಸದ್ಧಿಗಳೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ ಅಂತಾ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು,ಅವರ ಬಗ್ಗೆ ಅಪಾರವಾದ ಗೌರವ ಭಾವನೆಯೂ ಇದೆ. ಖರ್ಗೆ ಬಗ್ಗೆ ವ್ಯಂಗ್ಯ ಹೇಳಿಕೆ ಧೃಡಪಡಿಸಿದರೆ ಯಾವುದೇ ಶಿಕ್ಷೆ ಅನುಭವಿಸಲು ನಾನು ಸಿದ್ಧ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಬಗ್ಗೆ ಹೇಳುವ ಸಂದರ್ಭದಲ್ಲಿ ಬಾಯ್ತಪ್ಪಿನಿಂದ ಖರ್ಗೆ ಹೆಸರು ಹೇಳಿದ್ದೇನೆಯೇ ಹೊರತು, ಖರ್ಗೆ ಕುರಿತು ಅವಹೇಳನದ ಮಾತುಗಳನ್ನೇ ಆಡಿಲ್ಲ. ಕಾಂಗ್ರೆಸ್‌ ಮುಖಂಡರು ರಾಜಕಾರಣದ ಸಲುವಾಗಿ ನನ್ನ ಹೇಳಿಕೆ ತಿರುಚಿದ್ದಾರೆ ಎಂದರು. ಡಾ.ಕಸ್ತೂರಿ ರಂಗನ್‌ ವರದಿ ಪರವಾಗಿ ಅರಣ್ಯ ಸಚಿವರು ಮಾತನಾಡಿದ ಕಾರಣ ಅವರಿಗೆ ಮಲೆನಾಡಿನ ಜನರ ಮತ್ತು ಅರಣ್ಯ ಸಮಸ್ಯೆ ಅರಿವಿಲ್ಲ ಎಂದು ಹೇಳಿದ್ದೇನೆಯೇ ಹೊರತು, ಯಾರ ಜಾತಿ ನಿಂದನೆಯನ್ನೂ ಮಾಡಿಲ್ಲ. ಕಾಂಗ್ರೆಸ್ಸಿಗರು ನನ್ನ ಹೇಳಿಕೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು ದೂರು ದಾಖಲಿಸಲಾಗಿದೆ. ಇದನ್ನು ಎದುರಿಸುವ ಶಕ್ತಿಯೂ ನನಗಿದೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎರಡು ಡೇಟ್ ಮಿಸ್ ಆಗಿದೆ, ಈ ಬಾರಿ ಆಗಲ್ಲ: ಡಿಕೆಶಿ ಜೊತೆಗಿದ್ದಾರೆ ಇಷ್ಟು ಶಾಸಕರು... ಇಕ್ಬಾಲ್ ಶಾಕಿಂಗ್ ಹೇಳಿಕೆ

ಯತೀಂದ್ರನೇ ನಮ್ಮ ಹೈಕಮಾಂಡ್, ಅವರು ಹೇಳಿದ್ದನ್ನು ಕೇಳೋಣ: ಡಿಕೆ ಶಿವಕುಮಾರ್ ಟಾಂಗ್

ಸಿಎಂ ಬದಲಾವಣೆ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಮಹತ್ವದ ಹೇಳಿಕೆ

ಬಿಹಾರ ಸದನದಲ್ಲಿ ತೂರಾಡುತ್ತಿದ್ದ ತೇಜಸ್ವಿ ಯಾದವ್: ಮದ್ಯಪಾನ ಮಾಡಿ ಬಂದಿದ್ರಾ ಬಿಜೆಪಿ ಅನುಮಾನ Video

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಮುಂದಿನ ಸುದ್ದಿ
Show comments