Daily Horoscope
✕

ಜನಾರ್ಧನ ರೆಡ್ಡಿ ಮೇಲೆ ಕೇಸ್ ಆಗಿದೆ ಭರತ್ ರೆಡ್ಡಿ ಮೇಲೆ ಯಾಕಿಲ್ಲ: ಎನ್ ರವಿಕುಮಾರ್

Sampriya
ಶನಿವಾರ, 3 ಜನವರಿ 2026 (20:26 IST)
ಬೆಂಗಳೂರು: ಬಳ್ಳಾರಿಯ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಮನೆ ಮುಂದೆ ಕಾಂಗ್ರೆಸ್ಸಿನವರೇ ಗಲಾಟೆ ಮಾಡಿದ್ದಾರೆ. ಕಾಂಗ್ರೆಸ್ಸಿನವರ ಬಂದೂಕಿನಿಂದ ಒಬ್ಬರ ಹತ್ಯೆ ಆಗಿದೆ. ಆದರೆ, ಜನಾರ್ಧನ ರೆಡ್ಡಿ ಮೇಲೆ ಕೇಸ್. ಇದ್ಯಾವ ಪ್ರಜಾಪ್ರಭುತ್ವ? ಇದ್ಯಾವ ವ್ಯವಸ್ಥೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಪ್ರಶ್ನಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಪ್ರಜಾಪ್ರಭುತ್ವದ ಆಡಳಿತ ನಡೆಸುತ್ತಿದ್ದಾರಾ? ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರಾ ಎಂದು ಕೇಳಿದರು. 

ಗಲಾಟೆ ಮಾಡಿದ ನಾರಾ ಭರತ್ ರೆಡ್ಡಿ ವಿರುದ್ಧ ಎಫ್‍ಐಆರ್ ಆಗಿಲ್ಲವೇಕೆ ಎಂದು ಅವರು ಆಕ್ಷೇಪಿಸಿದರು. ಕೇವಲ ಬಿಜೆಪಿ ಶಾಸಕರು, ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ, ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ಮಾಡಿಲ್ಲವೇಕೆ ಎಂದು ಟೀಕಿಸಿದರು.

ನಾರಾ ಭರತ್ ರೆಡ್ಡಿಗೆ ರಕ್ಷಣೆ ನೀಡುವ ಆರೇಳು ಗನ್‍ಮ್ಯಾನ್‍ಗಳು ಬಳಸುತ್ತಿದ್ದ ಆರೇಳು ಬಂದೂಕುಗಳಿಂದ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ಮನೆಗೆ ಶೂಟ್ ಮಾಡಿದ್ದಾರೆ. ಗ್ಲಾಸ್‍ಗಳು ಒಡೆದುಹೋಗಿವೆ. ಈ ಗನ್‍ಮ್ಯಾನ್‍ಗಳು ಬಳಸುತ್ತಿದ್ದ ಆರೇಳು ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.

ಜನಾರ್ಧನ ರೆಡ್ಡಿಯವರ ಮನೆ ಮುಂದೆ ಕಾಂಗ್ರೆಸ್ಸಿನ ಸಾವಿರಾರು ಜನರು ಶಾಸಕ ನಾರಾ ಭರತ್ ರೆಡ್ಡಿ ಜೊತೆ ಬಂದಿದ್ದಾರೆ. ಆಗ ದೊಡ್ಡ ಗಲಾಟೆಯೇ ಆಗಿದೆ ಎಂದು ವಿವರಿಸಿದರು. ಅವರ ಹಿಂಬಾಲಕರು, ಆಪ್ತ ಸಹಾಯಕರಾಗಿದ್ದವರು ಸೇರಿ ಇದನ್ನು ಮಾಡಿದ್ದಾರೆ ಎಂದು ದೂರಿದರು.

ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ.

ಕರ್ನಾಟಕದಲ್ಲಿ ಗೂಂಡಾರಾಜ್ಯ ನಡೆಯುತ್ತಿದೆ. ಕಾನೂನು- ಸುವ್ಯವಸ್ಥೆ ಎಂಬುದು ಸಂಪೂರ್ಣ ನೆಲಕಚ್ಚಿ ಹೋಗಿದೆ. ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇದರ ತನಿಖೆ ನಡೆಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಇದನ್ನು ನಿಮ್ಮ ಎಸ್‍ಐಟಿಗೆ ಕೊಟ್ಟರೆ, ಸಂಪೂರ್ಣವಾಗಿ ಕೇಸು ಮುಚ್ಚಿ ಹಾಕಿದಂತೆ ಆಗಲಿದೆ ಎಂದು ವಿಶ್ಲೇಷಿಸಿದರು.

ಪ್ರತಿಭಟನೆ ಹತ್ತಿಕ್ಕುವ ಸರಕಾರ..
ಬೆಂಗಳೂರು - ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಕಳೆದ 107 ದಿನಗಳಿಂದ ಪ್ರತಿಭಟಿಸುತ್ತಿದ್ದ ಹೋರಾಟಗಾರರ ಮೇಲೆ ಎಫ್.ಐ.ಆರ್. ದಾಖಲಿಸಿರುವುದು ಹಾಗೂ ರಾತ್ರೋರಾತ್ರಿ ಪ್ರತಿಭಟನಾ ಸ್ಥಳದ ಪೆಂಡಾಲ್ ತೆಗೆದಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ವಿರೋಧಿ, ಇದು ಪ್ರತಿಭಟನೆಯನ್ನು ಹತ್ತಿಕ್ಕುವ ಸರಕಾರ ಎಂದು ಖಂಡಿಸಿದರು.

ಈ ರಾಜ್ಯದಲ್ಲಿ ನ್ಯಾಯಕ್ಕಾಗಿ ಯಾರೂ ಕೂಡ ಪ್ರತಿಭಟನೆ ಮಾಡಬಾರದು, ಮಾಡಿದರೆ ಈ ಸರ್ಕಾರ ಅವರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ಎಫ್.ಐ.ಆರ್. ದಾಖಲಿಸಿ, ಬಂಧಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಈ ಕಾಂಗ್ರೆಸ್ ಸರಕಾರ ಬಂದಾಗಿನಿಂದ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಬಗ್ಗೆ ಕೂಡಲೇ ಸರಕಾರ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನಾನಿರತ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುಪಿಎ ಅವಧಿಯಲ್ಲಿ ಮೋದಿ ಜೈಲಿಗೆ ಹೋಗಬೇಕಿತ್ತು, ಕಾಂಗ್ರೆಸ್ ನವರೇ ತಡೆದರು, ಅದಕ್ಕೇ ಈಗ ಅನುಭವಿಸ್ತಿದ್ದೀವಿ: ವೀರಪ್ಪ ಮೊಯಿಲಿ Video

ಜಾಗತಿಕ ಧಾರ್ಮಿಕ ಜನಸಂಖ್ಯೆಯಲ್ಲಿ ಭಾರಿ ಬದಲಾವಣೆ: 2035ಕ್ಕೆ ನಂಬರ್ 1 ಸ್ಥಾನಕ್ಕೇರಲಿದೆ ಇಸ್ಲಾಂ

ದೆಹಲಿ ವಿಮಾನ ನಿಲ್ದಾಣದಲ್ಲಿ ದಾಖಲೆಯಿಲ್ಲದೇ ನುಗ್ಗಲು ಯತ್ನಿಸಿದ ವ್ಯಕ್ತಿ: ಮಿಂಚಿನ ವೇಗದಲ್ಲಿ ಲಾಕ್ ಮಾಡಿದ ಸಿಐಎಸ್ಎಫ್ ಸಿಬ್ಬಂದಿ Video

ಮೃತಪಟ್ಟಿದ್ದಾಳೆಂದು ಚಿತಾಗಾರದ ಕುಲುಮೆಯೊಳಗೆ ಹಾಕಿದಾಗ ಚೀರಿದ ಮಹಿಳೆ: ಆದರೆ ನಂತರ ಆಗಿದ್ದೇ ಬೇರೆ: ಬೆಚ್ಚಿಬೀಳಿಸುವ Video

Karnataka Weather: ಇಂದು ರಾಜ್ಯದಲ್ಲಿ ಚಳಿಯ ತೀವ್ರತೆ ಎಷ್ಟಿರಲಿದೆ, ಇಲ್ಲಿದೆ ಹವಾಮಾನ ವರದಿ

ಮುಂದಿನ ಸುದ್ದಿ
Show comments