Daily Horoscope
✕

ಮರಕ್ಕೆ ಕಾರು ಡಿಕ್ಕಿ

Webdunia
ಶುಕ್ರವಾರ, 11 ಮಾರ್ಚ್ 2022 (19:52 IST)
ಮರಕ್ಕೆ ಕಾರು ಢಿಕ್ಕಿ ಹೊಡೆದ ಸಂಭವಿಸಿದ ಭೀಕರ ಅವಘಡದಲ್ಲಿ ಐವರು ಸ್ಥಳದಲ್ಲೇ ದಾರುಣವಾಗಿಮೃತಪಟ್ಟ ಘಟನೆ ಅಫಜಲಪುರ- ದುಧನಿ ನಡುವಿನ ಬಳೂರ್ಗಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.
 
ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ್ ಗಾಣಗಾಪುರ ದತ್ತಾತ್ರೇಯ ದರ್ಶನ ಪಡೆದು ಮಹಾರಾಷ್ಟ್ರ ಕ್ಕೆ ವಾಪಸ್ಸಾಗುತ್ತಿದ್ದ ಅಹಮದ ನಗರದವರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
ಗಾಣಗಾಪುರದ ದತ್ತಾತ್ರೇಯನ ದರ್ಶನ ಮುಗಿಸಿಕೊಂಡು ಮರಳುವಾಗ ಅವಘಡ ಸಂಭವಿಸಿದ್ದು, ಚಾಲಕ ಸೇರಿದಂತೆ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಅಫಜಲಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಐವರ ಬದಲು ಮಕ್ಕಳು ಸೇರಿ ಒಂಭತ್ತು ಜನ ಪ್ರಯಾಣಿಸುತ್ತಿದ್ದರು.
 
ದೇವಲ್ ಗಾಣಗಾಪುರದಿಂದ ದತ್ತಾತ್ರೇಯ ದರ್ಶನ ಪಡೆದು ಮಹಾರಾಷ್ಟ್ರಕ್ಕೆ ವಾಪಾಸ್ ಆಗುತ್ತಿದ್ದ ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು, ಚಾಲಕ ಸೇರಿದ್ದು, ಘಟನಾ ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.‌

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಡಿ, ಐಟಿ ರೇಡ್ ಬಗ್ಗೆ ನಮಗೆ ಅಧಿಕಾರಿಗಳೇ ಮಾಹಿತಿ ನೀಡ್ತಾರೆ, 200 ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ: ರಾಹುಲ್ ಗಾಂಧಿ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಅಭಿಜಿತ್ ದಿಪ್ಕೆ ಆಂಡ್ ಗ್ಯಾಂಗ್ ನ್ಯಾಯಾಲಯದ ಶ್ಯೂರಿಟಿ ಬಾಂಡ್ ನಿಯಮ ಮುರಿದರೆ ಏನಾಗುತ್ತದೆ: ಇಲ್ಲಿದೆ ನೋಡಿ ವಿವರ

ದಸರಾ ಟೈಂನಲ್ಲೇ ಪರೀಕ್ಷೆ ಯಾಕೆ ಮಾಡ್ತೀರಿ.. ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು Video

ಇದನ್ನು ಡಿಲೀಟ್ ಮಾಡಬಾರದಾ ನೀವೇ ಹೇಳಿ: ಜಂತರ್ ಮಂತರ್ ಪ್ರತಿಭಟನೆಗೆ ಎರಡು ಐಡಿ ಕಾರ್ಡ್ ಹಿಡಿದು ಬಂದ ವ್ಯಕ್ತಿ Video

ಮುಂದಿನ ಸುದ್ದಿ
Show comments