BMTC ರಾತ್ರಿ ಪಾಳಿ ಬಸ್‌ಗಳಲ್ಲಿ ಹೆಚ್ಚುವರಿ ಟಿಕೆಟ್ ಶುಲ್ಕ ತೆಗೆದುಕೊಳ್ಳುವ ವ್ಯವಸ್ಥೆಯನ್ನು ರದ್ದು ಮಾಡಿ, ಇಡೀ ದಿನ ಆಯಾ ಬಸ್‌ಗಳ ಸೇವೆಗೆ ತಕ್ಕಂತೆ ಏಕರೂಪ ಟಿಕೆಟ್ ಶುಲ್ಕ ಪಡೆಯಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ ಅವರು,BMTC ರಚನೆಯಾಗಿ 25 ವರ್ಷ ಪೂರೈಸಿದ್ದು, ಅದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಬಿಎಂಟಿಸಿ ಸೇವೆ ಸೇರಿದಂತೆ ಇನ್ನಿತರ ಮಾಹಿತಿ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಅದರ ಜತೆಗೆ ಬಿಎಂಟಿಸಿಯಲ್ಲಿ ಏಕರೂಪ ಟಿಕೆಟ್ ದರ ನಿಗದಿ ಮಾಡಲಾಗುತ್ತಿದೆ. ಈವರೆಗೆ ರಾತ್ರಿ ಪಾಳಿಯಲ್ಲಿ ಸಂಚರಿಸುವ ಬಸ್‌ಗಳಲ್ಲಿ ಮಾಮೂಲಿ ದರದ ಶೇ.50ರಷ್ಟುಹೆಚ್ಚಿನ ಟಿಕೆಟ್ ದರ ವಸೂಲಿ ಮಾಡಲಾಗುತ್ತಿತ್ತು. ಅದನ್ನು ರದ್ದು ಮಾಡಿ, ಎಲ್ಲ ಅವಧಿಯಲ್ಲಿ ಆಯಾ ಬಸ್ ಸೇವೆಗೆ ನಿಗದಿ ಮಾಡಿರುವ ಟಿಕೆಟ್ ದರವನ್ನು ಶಿಘ್ರವೇ ಹಿಂಪಡೆಯಲಾಗುವುದು ಅಂತಾ ಮಾತನಾಡಿದ್ದಾರೆ.