Select Your Language

Notifications

webdunia
webdunia
webdunia
webdunia

ಮಗಳ ಭ್ರೂಣ ಹತ್ಯೆ ಮಾಡಿದರಾ ಸಿ.ಎಂ ಇಬ್ರಾಹಿಂ ?

ಮಗಳ ಭ್ರೂಣ ಹತ್ಯೆ ಮಾಡಿದರಾ ಸಿ.ಎಂ ಇಬ್ರಾಹಿಂ ?
ಬೆಂಗಳೂರು , ಮಂಗಳವಾರ, 3 ಜನವರಿ 2017 (09:30 IST)
ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ ಇಬ್ರಾಹಿಂ ಕುಟುಂಬದ ಮೇಲೆ ಮೇಲೆ ಭ್ರೂಣ ಹತ್ಯೆ ಆರೋಪ ಕೇಳಿ ಬಂದಿದೆ.
ಖುದ್ದು ಅವರ ತಮ್ಮ ಸಿ.ಎಂ ಖಾದರ್ ಈ ಆರೋಪವನ್ನು ಮಾಡಿದ್ದಾರೆ.
 

 
ಇಬ್ರಾಹಿಂ ಪುತ್ರಿ ಇಫಾ ಮತ್ತು ಅವರ ತಮ್ಮನ ಪುತ್ರ ಸಿ.ಎಂ. ಫೈಸಲ್ 7 ತಿಂಗಳ ಹಿಂದೆ  ಪ್ರೀತಿಸಿ ಮದುವೆಯಾಗಿದ್ದರು. 
 
ಈ ಮದುವೆಗೆ ಇಬ್ರಾಹಿಂ ಕುಟುಂಬ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಇಫಾ ಈಗ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ನಿನ್ನನ್ನು ನೋಡಬೇಕು ಅನ್ನಿಸುತ್ತದೆ ಎಂದು ಹೇಳಿ ಖಾದರ್ ಪತ್ನಿ ಕಳೆದ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದರು. ಮೊನ್ನೆ ಆಕೆಯ ಪತಿ ತವರುಮನೆಗೆ ಬಿಡಲು ಬಂದಾಗ ಆತನ ಮೇಲೆ ಹಲ್ಲೆ ಕೂಡ ನಡೆದಿತ್ತು.
 
ನಿನ್ನೆ ಮುಂಜಾನೆ ಇಫಾಗೆ ಆಕೆಯ ತಾಯಿ ಹಣ್ಣಿನ ಜ್ಯೂಸ್ ನೀಡಿದ್ದರು. ಬಳಿಕ ಆಕೆಗೆ ಹೊಟ್ಟೆ ನೋವು ಕಂಡುಬಂದಿತ್ತು. ಆಕೆ ಪತಿಗೆ ಫೋನ್ ಕರೆ ಮಾಡಿ ತಕ್ಷಣ ಬರುವಂತೆ ಹೇಳಿದ್ದಾಳೆ. ಆತ ಮೈಸೂರಿನಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹಣ ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂದು ಇಬ್ರಾಹಿಂ ಸೋದರ ಖಾದರ್ ಆರೋಪಿಸಿದ್ದಾರೆ. 
 
ನಮ್ಮ (ಪತಿಯ) ಕುಟುಂಬಕ್ಕೆ ಮಾಹಿತಿ ನೀಡದೆ ಸೊಸೆ ಗರ್ಭಪಾತ ಮಾಡಿಸಲಾಗಿದೆ. ಈ ಕುರಿತು ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಖಾದರ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಕಲಿಸುವ ನೆಪದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ