Select Your Language

Notifications

webdunia
webdunia
webdunia
webdunia

ಬೈಕ್ ಕಲಿಸುವ ನೆಪದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ

ಬೈಕ್ ಕಲಿಸುವ ನೆಪದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ
ಚಿಕ್ಕೋಡಿ , ಮಂಗಳವಾರ, 3 ಜನವರಿ 2017 (09:10 IST)
ಬೈಕ್ ಕಲಿಸುವುದಾಗಿ ಬಾಲಕನನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ ಹೇಯ ಘಟನೆ ಗೋಕಾಕ್ ತಾಲೂಕಿನ ಮೇಲ್ಮನಟ್ಟಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 
ಆರೋಪಿಯನ್ನು ಅದೇ ಗ್ರಾಮದ ನಿವಾಸಿ ಅನ್ವರ್ ಇಮಾಮ್ ಸಾಬ್ ಅಂಬಿನಾಳ ಎಂದು ಗುರುತಿಸಲಾಗಿದ್ದು 12 ವರ್ಷದ ಬಾಲಕನ ಮೇಲಾತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಪೀಡಿತನ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
 
ಬೈಕ್ ಕಲಿಸುವ ನೆಪ ಹೇಳಿ ಬಾಲಕನನ್ನು ಗ್ರಾಮದ ಹೊರವಲಯದ ಗುಡ್ಡಕ್ಕೆ ಕರೆದುಕೊಂಡು ಹೋದ ಬಾಲಕ ಅಲ್ಲಿ ಆತನೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಮನೆಗೆ  ಹಿಂತಿರುಗಿದ ಬಾಲಕ ಪೋಷಕರ ಬಳಿ ಎಲ್ಲವನ್ನು ಹೇಳಿಕೊಂಡಿದ್ದಾನೆ.
 
ಅಸ್ವಸ್ಥನಾಗಿರುವ ಬಾಲಕನನ್ನು ಗೋಕಾಕ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
 
ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಗೋಕಾಕ್ ಗ್ರಾಮೀಣ ಠಾಣಾ ಪೊಲೀಸರು ಶೋಧ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಾಚರಣೆ ಸಂದರ್ಭ ಮಹಿಳೆಯರ ಮೇಲೆ ದೌರ್ಜನ್ಯ ಸಹಜ: ಪರಂ