Publish Date: Fri, 20 Jun 2025 (15:28 IST)
Updated Date: Fri, 20 Jun 2025 (15:30 IST)
ಬೆಂಗಳೂರು: ಪಕ್ಷದೊಳಗೆ ಕೆಲವರಿಗೆ ಅತೃಪ್ತಿ ಇರೋದು ನಿಜ. ಹಿರಿಯ ನಾಯಕರೆಲ್ಲ ಸೇರಿಕೊಂಡು ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಅವರು ಇಂದು ಬೆಂಗಳೂರಿನಲ್ಲಿ ರೆಬಲ್ಸ್‌ಗಳ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಕೆಲವರಿಗೆ ಅತೃಪ್ತಿ ಇರೋದು ಸತ್ಯ. ಅದು ಸ್ಥಳೀಯ ಸಮಸ್ಯೆ. ನಾನು, ಜೋಶಿ, ಸಿ.ಟಿ ರವಿ ಸೇರಿ ಹಿರಿಯರು ಚರ್ಚೆ ಮಾಡಿದ್ದೇವೆ. ಪಕ್ಷದೊಳಗಿನ ಸಮಸ್ಯೆಯನ್ನು ಪ್ರಮುಖರೆಲ್ಲ ಕೂತು ಬಗೆಹರಿಸುತ್ತೇವೆ ಎಂದರು.
ಯಾವುದೇ ಸಮಯದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ಬರಬಹುದು.ಆದ್ದರಿಂದ ಬಿಜೆಪಿ ಜವಾಬ್ದಾರಿ ಜಾಸ್ತಿಯಿದೆ. ಒಳಜಗಳ ಬಿಟ್ಟು ನಾವು ಒಟ್ಟಾಗಿ ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡಬೇಕಿದೆ. ಇದಕ್ಕೆ ಎಲ್ಲರೂ ಒಟ್ಟಾಗಿ ಹೋಗಬೇಕಿದೆ. ಈ ನಿಟ್ಟಿನಲ್ಲಿ ನಾವು ಎಲ್ಲರ ಮನವೊಲಿಕೆ ಮಾಡುತ್ತೇವೆ. ಒಟ್ಟಾಗಿ ಹೋಗುತ್ತೇವೆ ಎಂದು ತಿಳಿಸಿದರು.