Publish Date: Mon, 23 Nov 2026 (16:18 IST)Updated Date: Mon, 23 Nov 2026 (16:21 IST)
ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಗಳನ್ನ ಅನುಸರಿಸುತ್ತಾ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ನಂತರದಲ್ಲಿ ಕೇವಲ ಘೋಷಣೆಗಳಿಗೆ ಸೀಮಿತ ಆಗಿದ್ದಾರೆ. ಇವರ ನಡೆಗೂ ನುಡಿಗೂ ಅಜಗಜಾಂತರ ವ್ಯತ್ಯಾಸ ಇದೆ. ಹಿರಿಯೂರಿನಲ್ಲಿ ಮುಖ್ಯಮಂತ್ರಿಗಳು 2,500 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಕ್ಕೆ ಘೋಷಣೆ ಮಾಡಿದ್ದಾರೆ. ಎಲ್ಲಿದೆ ಸ್ವಾಮಿ ಎರಡೂವರೆ ಸಾವಿರ ಕೋಟಿ ರೂಪಾಯಿ? ಎಂದು ಪ್ರಶ್ನಿಸಿದರು.
ಸ್ವತಃ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಇವತ್ತು ಮುಖ್ಯಮಂತ್ರಿಗ¼ನ್ನು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಇವತ್ತು ಸಕಾಲದಲ್ಲಿ ಸಂಬಳ ಕೊಡೋದಕ್ಕೆ ಆಗುತ್ತಿಲ್ಲ ಎಂದು ಗಮನ ಸೆಳೆದರು.
ಆಶಾ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲೂ ಬೆಂಗಳೂರು ಮಹಾನಗರದಲ್ಲಿ ಇದ್ದುಕೊಂಡು ಕಳೆದ ಏಳು ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಮನೆ, ಮಠ, ಕುಟುಂಬ ಎಲ್ಲವನ್ನು ಬಿಟ್ಟು ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು 'ನಾನು ನಿನ್ನ, ನಿಮ್ಮೆಲ್ಲರ ಅಣ್ಣ ನಾನು, ಸಹೋದರ' ಹೇಳುತ್ತಾರೆ. ಆದರೆ, ಸಹೋದರನಾಗಿ, ಅಣ್ಣನಾಗಿ ಈ ರೀತಿ ನಡೆದುಕೊಳ್ಳುವುದು ನಿಮಗೆ ಶೋಭೆ ತರುತ್ತದಾ ಮುಖ್ಯಮಂತ್ರಿಗಳೇ? ಎಂದು ಪ್ರಶ್ನೆ ಹಾಕಿದರು.
ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಸುವ ಕುರಿತು ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲೂ ಹೇಳಿದೆ. ಗೌರವಧನ ಹೆಚ್ಚಿಸುತ್ತೇವೆ ಅಂತ ಹೇಳಿದ್ದರು. ಆದರೆ ಮೊನ್ನೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದಾಗ ಆಶಾ ಕಾರ್ಯಕರ್ತರಿಗೆ 'ತಾಯಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ತಾವೆಲ್ಲ ಯೋಚನೆ ಮಾಡಬೇಕು ಎಂದು ಪಾಠ ಹೇಳಿ ಕಳಿಸಿದ್ದಾರೆ ಮುಖ್ಯಮಂತ್ರಿಗಳು ಎಂದು ಆಕ್ಷೇಪಿಸಿದರು.
ಆಶಾ ಕಾರ್ಯಕರ್ತರಿಗೆ ಅವರ ಗೌರವಧನ ಹೆಚ್ಚಿಸುವುದಕ್ಕೆ ನಿಮಗೆ ಆಗೋದಿಲ್ಲ ಅಂತ ಹೇಳಿದ್ರೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 'ಭಾರತ ಜೋಡೋ' ಮಾಡೋಕೆ ಏನು ಹೊರಟಿದ್ದೀರಿ? ಭಾರತ ಜೋಡೋ ಸಂಘಗಳನ್ನು ರಚಿಸಿ ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅವರಿಗೆ ಸಂಬಳ ಕೊಡುವಂತಹ ಕೆಲಸ ಇವತ್ತು ಕಾಂಗ್ರೆಸ್ ಸರ್ಕಾರ ಮಾಡಲು ಮುಂದಾಗಿದೆ. ಇದೇನು ಗಂಜಿ ಕೇಂದ್ರನಾ ಹಾಗಾದ್ರೆ? ರಾಜ್ಯದ ತೆರಿಗೆದಾರರ ಹಣವನ್ನು ಈ ರೀತಿ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಶಾಸಕರನ್ನು, ಕಾರ್ಯಕರ್ತರನ್ನು ಸಾಕೋದಕ್ಕೆ ಇವತ್ತು ತೆರಿಗೆದಾರರ ದುಡ್ಡನ್ನ ಪೆÇೀಲು ಮಾಡೋದಕ್ಕೆ ಹೊರಟಿದ್ದೀರಲ್ಲ ಎಂದು ಟೀಕಿಸಿದರು.
ಇಂತಹ ಬರಗಾಲದ ಸಂದರ್ಭದಲ್ಲೂ ಕೂಡ ಮುಖ್ಯಮಂತ್ರಿಗಳಿಗೆ ರೈತರ ಸಂಕಷ್ಟಕ್ಕೆ ಸ್ಪಂದನೆ ಮಾಡಬೇಕು ಅಂತ ಹೇಳಿ ಅನ್ನಿಸೋದಿಲ್ಲ. ಆದರೆ ಕಾಂಗ್ರೆಸ್ ಶಾಸಕರ ಸಂಕಷ್ಟಕ್ಕೆ ಸ್ಪಂದನೆ ಮಾಡುವಂತಹ ಬುದ್ಧಿವಂತಿಕೆ ಪ್ರದರ್ಶನ ಮಾಡ್ತಾರೆ. ಇಂತಹ ಬರಗಾಲದ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷರು, ನಿಗಮಗಳಿಗೆ ಚೇರ್ಮನ್ ಮಾಡುವಂತಹ ಅವಶ್ಯಕತೆ, ಅಗತ್ಯ ಯಾಕಿತ್ತು ಡಿ.ಕೆ. ಶಿವಕುಮಾರ್ ಅವರೇ? ಎಂದು ಪ್ರಶ್ನಿಸಿದರು.
ರೈತರಿಗೆ ಪರಿಹಾರ ಕೊಡುವುದಾಗಿ ಹೇಳಿ 5,000 ರೂಪಾಯಿ ಘೋಷಣೆ ಮಾಡಿ ಕೇವಲ ಘೋಷಣೆ ಘೋಷಣೆಯಾಗೇ ಉಳಿದಿದೆ. ಪರಮೇಶ್ವರ್ ಅವರು ಹೆಕ್ಟೇರಿಗೆ 5,000 ರೂಪಾಯಿ ಅಂತ ಹೇಳುತ್ತಾರೆ. ಕಂದಾಯ ಸಚಿವರು, ಮುಖ್ಯಮಂತ್ರಿಗಳು ಒಂದು ಎಕರೆಗೆ 5,000 ರೂಪಾಯಿ ಅಂತ ಹೇಳ್ತಾರೆ. ಇದರ ಬಗ್ಗೆನೇ ಸ್ಪಷ್ಟತೆ ಇಲ್ಲ ಇವತ್ತು ಸರ್ಕಾರದ ಕಡೆಯಿಂದ. ಇವರ ಗೊಂದಲಕ್ಕೆ ಇವತ್ತು ಅಧಿಕಾರಿಗಳು ಕೂಡ ಯಾವುದೇ ತೀರ್ಮಾನ ಮಾಡದೇ ಗೊಂದಲದಲ್ಲಿ ಇದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಇದರ ನಡುವೆ ತೆರಿಗೆದಾರರ ದುಡ್ಡನ್ನು ಪೆÇೀಲು ಮಾಡಿ, ದುರುಪಯೋಗ ಮಾಡಿಕೊಂಡು ರೈತರು ಇವತ್ತು ಬರಗಾಲದ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ನೆರವಿಗೂ ಕೂಡ ಬರುತ್ತಿಲ್ಲ. ಎಸ್‍ಸಿಪಿ-ಟಿಎಸ್‍ಪಿ ಹಣವನ್ನು ಕೂಡ ದುರುಪಯೋಗ ಮಾಡಿಕೊಂಡಿದ್ದಾರೆ. ಇವೆಲ್ಲ ವಿಚಾರಗಳನ್ನು ಎರಡನೇ ತಾರೀಕಿನಿಂದ ಪ್ರಾರಂಭವಾಗುವಂತಹ ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ಸಂಗತಿಗಳನ್ನು ಸಮರ್ಥವಾಗಿ ಚರ್ಚೆ ಮಾಡಿ ಸದನದಲ್ಲಿ ಈ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸ ಭಾರತೀಯ ಜನತಾ ಪಾರ್ಟಿ ಮಾಡಲಿದೆ ಎಂದು ಹೇಳಿದರು.
ಹಿರಿಯೂರು ಉಪಚುನಾವಣೆ ಟಿಕೆಟ್ ವಿಚಾರದ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಿಜೆಪಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ, ರಾಜ್ಯ ನಾಯಕರ ಅಭಿಪ್ರಾಯವನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತು ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತರುವಂತಹ ಕೆಲಸ ನಾನು ಮಾಡಿದ್ದೇನೆ. ಕುಮಾರಸ್ವಾಮಿ ಅವರು ಕೂಡ ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಜೆಡಿಎಸ್‍ಗೆ ಕೊಡಬೇಕು ಅನ್ನುವ ವಿನಂತಿ ಮಾಡಿದ್ದಾರೆ. ಇದರಲ್ಲಿ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧರಾಗಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡೋದ್ರಲ್ಲಿ ನಾವು ಯಶಸ್ವಿಯಾಗಿದ್ದೇವೆ, ಈ ಹಿರಿಯೂರಿನ ಉಪ ಚುನಾವಣೆಯಲ್ಲಿ ಕೂಡ ನಾವು ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸದಿಂದ ನುಡಿದರು.
ಮೂಡಿಗೆರೆಯ ಕಾಂಗ್ರೆಸ್ಸಿನ ಶಾಸಕಿ ನಯನಾ ಮೋಟಮ್ಮ, ಚಿಕ್ಕಮಗಳೂರಿನ ಕಾಂಗ್ರೆಸ್ಸಿನ ಮೂರು ಶಾಸಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಕಾಡಾನೆಗಳ ಹಾವಳಿಯನ್ನು ಸರಿಯಾದ ರೀತಿನಲ್ಲಿ ಅರಣ್ಯ ಅಧಿಕಾರಿಗಳು ನಿಭಾಯಿಸಲು ಆಗುತ್ತಿಲ್ಲ. ಅರಣ್ಯ ಅಧಿಕಾರಿಗಳು ಆ ಕಾಡಾನೆಗ¼ನ್ನು ಅಕ್ಕಪಕ್ಕದ ಕ್ಷೇತ್ರಗಳಿಗೆ ಓಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕರ ಬೇಡಿಕೆ ಸರಿಯಾಗೇ ಇದೆ. ಇವತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಾಡಾನೆಗಳಿಗೆ ಲಭ್ಯ ಜಮೀನಿನಲ್ಲಿ ಆನೆ ಶಿಬಿರ ರಚಿಸಬೇಕು. ಅಲ್ಲಿ ಗಿಡಗಳನ್ನು ಬೆಳೆಸಿ ಆನೆಗಳನ್ನ ಎಲಿಫೆಂಟ್ ಕ್ಯಾಂಪ್‍ಗೆ ಕಳಿಸುವ ಕೆಲಸ ಮಾಡಬೇಕು. ಈಗಿನ ಪದ್ಧತಿಯಿಂದ ಕಾಡಂಚಿನ ರೈತರು, ಕೃಷಿಕರು ಬಹಳ ತೊಂದರೆ ಎದುರಿಸುತ್ತಿದ್ದಾರೆ. ಕಾಡಾನೆಗಳ ಹಾವಳಿಯಿಂದ ಅವರ ಹೊಲಗದ್ದೆಗಳು ಇವತ್ತು ನಾಶ ಆಗುತ್ತಿವೆ ಎಂದು ಗಮನ ಸೆಳೆದರು. ಆನೆ ಕ್ಯಾಂಪ್ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗ್ರಹಿಸಿದರು.
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment..... ಮತ್ತಷ್ಟು ಓದಿ