Daily Horoscope
✕

ಕಿಕ್ ಔಟ್ ಮಾಡಿ ಎನ್ನುವಂತಹ ತಪ್ಪು ನಾನೇನು ಮಾಡಿದ್ದೆ.. ಸದಾನಂದ ಗೌಡರ ಬಗ್ಗೆ ವಿಜಯೇಂದ್ರಗೆ ಭಾರೀ ಬೇಸರ

ಕೃಷ್ಣವೇಣಿ ಕೆ
ಮಂಗಳವಾರ, 30 ಜೂನ್ 2026 (09:48 IST)
ಬೆಂಗಳೂರು: ನನ್ನನ್ನು ಕಿಕ್ ಔಟ್ ಮಾಡಿ ಎಂದು ಹೇಳುವಂತಹ ತಪ್ಪು ನಾನೇನು ಮಾಡಿದ್ದೆ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ  ವಿಜಯೇಂದ್ರ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ನಿನ್ನೆ ಸದಾನಂದ ಗೌಡರದ್ದು ಎನ್ನಲಾದ ಅಡಿಯೋವೊಂದು ವೈರಲ್ ಆಗಿತ್ತು. ಈ ಅಡಿಯೋದಲ್ಲಿ ದಿಲ್ಲಿ ಪ್ರತಿನಿಧಿಯೊಬ್ಬರಿಗೆ ಅಕ್ಟೋಬರ್ ನಲ್ಲಿ ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕಿಕ್ ಔಟ್ ಮಾಡಿ ಎನ್ನುತ್ತಾರೆ. ಈ ಅಡಿಯೋ ಈಗ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ.

ಅಡಿಯೋ ವೈರಲ್ ಆದ ಬೆನ್ನಲ್ಲೇ ಸದಾನಂದ ಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಇದು ನನ್ನ ಧ್ವನಿಯಲ್ಲ. ನನ್ನದಲ್ಲದ ಅಡಿಯೋ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದಿದ್ದರು. ಆದರೆ ಇದು ಹೈಕಮಾಂಡ್ ಮಟ್ಟಕ್ಕೆ ತಲುಪಿದೆ.

ಈ ಹಿನ್ನಲೆಯಲ್ಲಿ ಸದಾನಂದ ಗೌಡರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದು ವರಿಷ್ಠರನ್ನು ಭೇಟಿ ಮಾಡಿ ವಿವರಣೆ ನೀಡಲಿದ್ದಾರೆ. ಇದರ ನಡುವೆ ವಿಜಯೇಂದ್ರ ದೆಹಲಿ ನಾಯಕರ ಜೊತೆ ತಮ್ಮ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. ನನ್ನನ್ನು ಕಿಕ್ ಔಟ್ ಮಾಡುವಂತಹ ತಪ್ಪು ನಾನೇನು ಮಾಡಿದ್ದೆ. ಅವರ ಹೇಳಿಕೆ ನನಗೆ ನೋವು ತಂದಿದೆ ಎಂದು ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದುವೆ ಸೀಸನ್ ಆರಂಭ: ಚಿನ್ನದ ಬೆಲೆ ಮತ್ತೆ ಗಗನಕ್ಕೇರಲಿದೆಯೇ, ಮಾರುಕಟ್ಟೆ ತಜ್ಞರ ಲೆಕ್ಕಾಚಾರ ಏನು

ಕರ್ನಾಟಕ ರಾಜ್ಯ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ಕ್ಷೇತ್ರ ಯಾವುದು

ಮಹಿಳೆಯರ ಹೆಸರಲ್ಲಿ ಸೈಟ್ ಖರೀದಿ: ಯಾವ ಲಾಭಗಳು ಸಿಗುತ್ತವೆ, ಖರೀದಿಗೂ ಮುನ್ನ ಗಮನಿಸಬೇಕಾದ ಅಂಶಗಳೇನು

ಕಬ್ಬು ಬೆಳೆಗಾರರ ಹೋರಾಟ, ಬರ, ಮತಾಂತರ ಕಾಯ್ದೆ ವಿವಾದ: ಬೆಳಗಾವಿ ಅಧಿವೇಶನದಲ್ಲಿ ಸದ್ದು ಮಾಡಲಿರುವ 5 ಪ್ರಮುಖ ಅಂಶಗಳು

Karnataka Weather: ಇಂದು ಸಂಜೆ ರಾಜ್ಯದ ಈ ಭಾಗಗಳಲ್ಲಿ ಮಳೆಯಾಗುವ ಸೂಚನೆ

ಮುಂದಿನ ಸುದ್ದಿ
Show comments