Select Your Language

Notifications

webdunia
webdunia
webdunia
webdunia

ಮಸೀದಿ ಒಳಗೆ ಎಸ್ಐಆರ್ ನಡೆಸಲಾಗ್ತಿದೆ: ಬಿವೈ ವಿಜಯೇಂದ್ರ ಗಂಭೀರ ಆರೋಪ

BY Vijayendra
ಬೆಂಗಳೂರು: ರಾಮನಗರದಲ್ಲಿ ಟೆಂಟ್ ಹಾಕಿ ಎಸ್ಐಆರ್ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜಯನಗರದಲ್ಲಿ ಮಸೀದಿಯೊಳಗೆ ಎಸ್ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರ ಚುನಾವಣೆ ಆಯೋಗ ಮನೆ ಮನೆಗೆ ತೆರಳಿ ಎಸ್ಐಆರ್ ಪ್ರಕ್ರಿಯೆ ನಡೆಸುವಂತೆ ಹೇಳಿದೆ. ಆದರೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕಿನಿಂದ ಕರ್ನಾಟಕದಲ್ಲಿ ಬಿಎಲ್ಒಗಳು ಮನೆ ಮನೆಗೆ ತೆರಳುತ್ತಿಲ್ಲ.

ಬದಲಾಗಿ ಜಯನಗರದಲ್ಲಿ ಮಸೀದಿಯೊಂದರಲ್ಲೂ ಎಸ್ಐಆರ್ ನಡೆಸಲಾಗುತ್ತಿದೆ. ಇದರಿಂದ ಹಿಂದೂಗಳಿಗೆ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.

ಇನ್ನು, ರಾಜ್ಯದ ಕೆಲವು ಕಡೆ ಅಧಿಕಾರಿಗಳು ಅಕ್ರಮವಾಗಿ ಒಂದು ಕಡೆ ಟೆಂಟ್ ಹಾಕಿ ಮತಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಸುತ್ತಿರುವ ಕೆಲವೊಂದು ಫೋಟೋ, ವಿಡಿಯೋಗಳನ್ನು ಬಿಜೆಪಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೀಗೂ ರಾಜೀನಾಮೆ ಪತ್ರ ಬರೀತಾರಾ.. ಮಹಿಳೆ ಬರೆದ ರಾಜೀನಾಮೆ ಪತ್ರ ನೋಡಿದ್ರೆ ಶಾಕ್ ಆಗ್ತೀರಾ