Publish Date: Mon, 31 Oct 2016 (15:24 IST)
Updated Date: Mon, 31 Oct 2016 (15:28 IST)
ಕರಾವಳಿ ಹೆದ್ದಾರಿಗಳಲ್ಲಿ ಇತ್ತೀಚಿಗೆ ಗ್ಯಾಸ್ ಟ್ಯಾಂಕರ್ ಅಪಘಾತಗಳು ಹೆಚ್ಚುತ್ತಲೇ ಇದ್ದು, ಇದು ಮುಂಜಾನೆ ಸಹ ಬಸ್ ಮತ್ತು ಗ್ಯಾಸ್ ಟ್ಯಾಂಕರ್ ಡಿಕ್ಕಿಯಾಗಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕಿನ್ನಿ- ಮೂಲ್ಕಿ ಬಳಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ದುರ್ಘಟನೆ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ವೇಗದೂತ ಬಸ್ಸಿಗೆ ಹಿಂದಿನಿದ ಟ್ಯಾಂಕರ್ ಘರ್ಷಿಸಿದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಗೆ ಉರುಳಿದೆ,
ಅಪಘಾತದಿಂದಾಗಿ ಬಸ್‌ನಲ್ಲಿದ್ದ 30 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಗಾಯಾಳುಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಡುಪಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ